ಮಂಕು ಬಡಿದು ಕುಳಿತಿದ್ದ ತಮ್ಮ ಮಕ್ಕಳಿಗೆ ಚಟುವಟಿಕೆ ನೀಡಲು ಮುಂದಾದ ಅಮೆರಿಕದ ದಂಪತಿಗಳು ವಿಶಿಷ್ಟ ಐಡಿಯಾವೊಂದನ್ನು ಮಾಡಿದ್ದು ನೆಟ್ಟಿಗರಿಂದ ಭಾರೀ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಲವ್‌ಲೆಂಡ್‌ನ ಜೋ ವೆಜೆನರ್ ಹಾಗೂ ಅವರ ಕುಟುಂಬ ತಮ್ಮ ನೆರೆಹೊರೆಯವರಿಗೆ ಐಸ್‌ಕ್ರೀಂ ಡೆಲಿವರಿ ಮಾಡುವ ಕೆಲಸಕ್ಕೆ ಮುಂದಾಗಿದ್ದಾರೆ.
ಈ ಮೂಲಕ ತಮ್ಮ ಮಕ್ಕಳಾದ ಮೇರಿ ಕೇಟ್ ಹಾಗೂ ಜೋಶ್‌ಗೆ ಹಣಕಾಸಿನ ನಿರ್ವಹಣೆ, ಸಮೂಹದೊಂದಿಗೆ ಸಂಪರ್ಕ ಸಾಧಿಸುವುದು ಹಾಗೂ ಸಾಮಾಜಿಕ ಕೌಶಲ್ಯಗಳನ್ನು ಕಲಿಸಲೆಂದು ಐಸ್ ಕ್ರೀಂ ಟ್ರಕ್ ಒಂದನ್ನು ಇಟ್ಟುಕೊಟ್ಟಿದ್ದಾರೆ.
BIG BREAKING: ದೇಶದಲ್ಲಿದೆ 4,11,189 ಕೋವಿಡ್ ಸಕ್ರಿಯ ಪ್ರಕರಣ, 24 ಗಂಟೆಯಲ್ಲಿ 416 ಜನರು ಮಹಾಮಾರಿಗೆ ಬಲಿ
ಜೋ ಮಡದಿ ಪ್ರೆಯ್ಡಾ ಕೊಟ್ಟ ’ಸ್ಪೆಷಲ್ ನೀಟ್ ಟ್ರೀಟ್’ ಎಂಬ ಹೆಸರಿನಲ್ಲಿ ಮೇರಿ ಕೇಟ್ ಹಾಗೂ ಜೋಶ್ ಐಸ್ ಕ್ರೀಂ ವ್ಯಾಪಾರ ಮಾಡುತ್ತಿದ್ದು ತಮ್ಮ ಪ್ರದೇಶದ ಮಂದಿಗೆ 5000ಕ್ಕೂ ಐಸ್‌ಕ್ರೀಂಗಳನ್ನು ಮಾರಾಟ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಈ ಸೇವೆ ಮುಂದುವರೆಸುವ ಉತ್ಸಾಹವನ್ನು ಇಟ್ಟುಕೊಂಡಿದೆ ಕುಟುಂಬ.