ಮಳೆಗಾಲದಲ್ಲಿ ಖಾಯಿಲೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಮಳೆಗಾಲದಲ್ಲಿ ರೋಗ ಬರದಂತೆ ನೋಡಿಕೊಳ್ಳಲು ಸ್ವಚ್ಛತೆ ಬಗ್ಗೆ ಹೆಚ್ಚು ಗಮನ ನೀಡಬೇಕು. ಅಡುಗೆ ಮನೆ ಹಾಗೂ ಸುತ್ತಮುತ್ತಲಿನ ಪ್ರದೇಶದವನ್ನು ಸ್ವಚ್ಛವಾಗಿಡಬೇಕು. ಮನೆಯಲ್ಲಿರುವ ಫ್ರಿಜ್ ಸ್ವಚ್ಛಗೊಳಿಸುವುದು ಬಹಳ ಮುಖ್ಯ. ಸಾಮಾನ್ಯವಾಗಿ ಫ್ರಿಜ್ ಸ್ವಚ್ಛಗೊಳಿಸುವುದನ್ನು ಅನೇಕರು ಮರೆಯುತ್ತಾರೆ. ಮತ್ತೆ ಕೆಲವರು ಫ್ರಿಜ್ ಕ್ಲಿನಿಂಗ್ ಕಿರಿಕಿರಿ ಎನ್ನುತ್ತಾರೆ. ಸರಳವಾಗಿ ಫ್ರಿಜ್ ಕ್ಲೀನ್ ಮಾಡಬಹುದು.
ಮೊದಲು ಫ್ರಿಜ್ ನಲ್ಲಿರುವ ಎಲ್ಲ ಸಾಮಾನುಗಳನ್ನು ಹೊರಗೆ ತೆಗೆದಿಡಿ. ತರಕಾರಿಗಳನ್ನು ಗಾಳಿಯಾಡುವ ಪ್ರದೇಶದಲ್ಲಿ ಇಡಿ.ನಂತ್ರ ಫ್ರಿಜ್ ಸ್ವಿಚ್ ಬಂದ್ ಮಾಡಿ. ನಂತ್ರ ಫ್ರಿಜ್ ಡಿ-ಫ್ರಾಸ್ಟ್ ಮಾಡಿ. ಇದ್ರಿಂದ ಫ್ರಿಜ್ ನಿಂದ ನೀರು ಹೊರಗೆ ಬರುವುದಿಲ್ಲ.
ಫ್ರಿಜ್ ನಲ್ಲಿರುವ ಟ್ರೇಗಳನ್ನು ಹೊರಗೆ ತೆಗೆದು ಸ್ವಚ್ಛಗೊಳಿಸಿ. ಟ್ರೇ ಒಣಗಿದ ನಂತ್ರ ಅದನ್ನು ಫ್ರಿಜ್ ನಲ್ಲಿಡಿ.
ಸ್ವಚ್ಛ ಬಟ್ಟೆಯಲ್ಲಿ ಫ್ರಿಜ್ ಸುತ್ತಮುತ್ತ ಕ್ಲೀನ್ ಮಾಡಿ. ಫ್ರಿಜ್ ಕ್ಲೀನ್ ಮಾಡುವ ಮೊದಲು ಫ್ರಿಜ್ ಕೆಳಗೆ ಬಟ್ಟೆ ಅಥವಾ ಪೇಪರ್ ಹಾಕಿ.
ಫ್ರಿಜ್ ನಲ್ಲಿ ಬೆಳ್ಳುಳ್ಳಿಯನ್ನು ಇಡಬೇಡಿ. ಫ್ರಿಜ್ ಪೂರ್ತಿ ಬೆಳ್ಳುಳ್ಳಿ ವಾಸನೆಯಾಗುತ್ತದೆ. ಹಾಗಾಗಿ ಬೆಳ್ಳುಳ್ಳಿಯನ್ನು ಸದಾ ಮುಚ್ಚಿಡಿ.
ಫ್ರಿಜ್ ನಿಂದ ವಾಸನೆ ಬರ್ತಿದ್ದರೆ ನೀರಿಗೆ ನಿಂಬೆ ರಸ ಹಾಕಿ ಕ್ಲೀನ್ ಮಾಡಿ. ಕ್ಲೀನ್ ಮಾಡಲು ಬಿಸಿ ನೀರನ್ನು ಬಳಸಿ. ಒಂದು ವೇಳೆ ವಾಸನೆ ಹೋಗದೆ ಹೋದಲ್ಲಿ ವಿನೆಗರ್ ಬಳಸಿ.
ಫ್ರಿಜ್ ಕ್ಲೀನ್ ಮಾಡುವಾಗ ಕಲೆಗಳು ಹೋಗದೆ ಇದ್ದಲ್ಲಿ ಸೋಪ್ ಆಯಿಲ್ ಹಾಕಿ ಕ್ಲೀನ್ ಮಾಡಬಹುದು.
ಫ್ರಿಜ್ ಕ್ಲೀನ್ ಆದ್ಮೇಲೆ ಬಾಗಿಲನ್ನು ಒಂದು ಗಂಟೆಗಳ ಕಾಲ ತೆರೆದಿಡಿ. ನಂತ್ರ ಎಲ್ಲ ವಸ್ತುಗಳನ್ನು ಫ್ರಿಜ್ ನಲ್ಲಿಟ್ಟು,ಸ್ವಿಚ್ ಹಾಕಿ,ಫ್ರಿಜ್ ಬಾಗಿಲು ಹಾಕಿ. ಫ್ರಿಜ್ ನಲ್ಲಿರುವ ಎಲ್ಲ ಆಹಾರವನ್ನು ಮುಚ್ಚಿಡಬೇಕು.