ಕೋವಿಡ್ ಟೆಸ್ಟಿಂಗ್ ಮಾಡಲು ಆರ್‌ಟಿ-ಪಿಸಿಆರ್ ಪರೀಕ್ಷಾ ಸೌಲಭ್ಯ ಅಳವಡಿಸಿದ ಬಳಿಕ ಕೊಲ್ಲಿ ದೇಶಗಳಿಗೆ ವಿಮಾನ ಸೇವೆಗಳನ್ನು ಮುಂದುವರೆಸಲು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಯುಎಇನ ನಾಗರಿಕ ವಿಮಾನಯಾನ ಸಚಿವಾಲಯದ ಸಮ್ಮತಿ ಸಿಕ್ಕಿದೆ.
ನಾಲ್ಕು ತಿಂಗಳ ಬಳಿಕ ಕೊಲ್ಲಿಗೆ ವಿಮಾನಯಾನ ಸೇವೆ ಮರು ಆರಂಭಗೊಳ್ಳಲಿದ್ದು, ಆಗಸ್ಟ್ 18ರಂದು ಮಂಗಳೂರಿನಿಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮೊದಲಿಗೆ ದುಬಾಯ್‌ನತ್ತ ಹಾರಲಿದೆ ಎಂದು ವಿಮಾನ ನಿಲ್ದಾಣದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ರೈಲು ಚಲಾಯಿಸುತ್ತಿದ್ದಾರೆ ನಕಲಿ ಐಎಎಸ್, ಐಪಿಎಸ್ ಅಧಿಕಾರಿ….!
ಸರ್ಕಾರದ ಮಾರ್ಗಸೂಚಿಗಳ ಅನುಸಾರ ಕೋವಿಡ್ ಸೋಂಕಿನ ನಿಯಂತ್ರಣಕ್ಕೆ ಅಗತ್ಯ ಮುನ್ನೆಚ್ಚರಿಗಳನ್ನು ತೆಗೆದುಕೊಳ್ಳುವ ಮೂಲಕ ಪ್ರಯಾಣಿಕರ ಸುರಕ್ಷತೆಗೆ ಒತ್ತಿ ನೀಡಿದ ಮಂಗಳೂರು ವಿಮಾನ ನಿಲ್ದಾಣ ಜಿಲ್ಲಾ ಆರೋಗ್ಯ ಇಲಾಖೆ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯ ನೆರವಿನಿಂದ ಆರ್‌ಟಿ-ಪಿಸಿಆರ್ ಪರೀಕ್ಷಾ ಸೌಲಭ್ಯವನ್ನು ಅಳವಡಿಸಿದೆ.
ತನ್ನಲ್ಲಿಗೆ ಬರುವ ಪ್ರಯಾಣಿಕರು ವಿಮಾನ ಏರುವ ಆರು ಗಂಟೆಗಳ ಮುನ್ನ ಆರ್‌ಟಿ-ಪಿಸಿಆರ್‌ನ ನೆಗಟಿವ್ ವರದಿ ಹೊಂದುವುದು ಕಡ್ಡಾಯವೆಂದು ಯುಎಇನ ಇತ್ತೀಚಿನ ಆರೋಗ್ಯ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.