ದೇಶದ ಸೆಲೆಬ್ರಿಟಿ ಫ್ಯಾಷನ್ ಡಿಸೈನರ್ ಗಳ ಪೈಕಿ ಒಬ್ಬರಾದ ಹೈದರಾಬಾದ್ ಮೂಲದ ಪ್ರತ್ಯುಷಾ ಗರಿಮಲಾ ತಮ್ಮ ನಿವಾಸದಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರ ಸಾವಿನ ಹಿಂದಿನ ಕಾರಣಗಳನ್ನು ಹುಡುಕುತ್ತಿದ್ದಾರೆ.
35 ವರ್ಷದ ಪ್ರತ್ಯುಷಾ ಹೈದರಾಬಾದಿನ ಪ್ರತಿಷ್ಠಿತ ಬಂಜಾರ ಹಿಲ್ಸ್ ನಲ್ಲಿರುವ ಫಿಲಂ ಸಿಟಿಯಲ್ಲಿ ವಾಸವಾಗಿದ್ದರು. ಅವರು ಮನೆಯಿಂದ ಹೊರ ಬರದ ಕಾರಣ ಅನುಮಾನಗೊಂಡ ಅಕ್ಕಪಕ್ಕದ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದು, ಬಾಗಿಲು ಒಡೆದು ಒಳ ಪ್ರವೇಶಿಸಿದ ವೇಳೆ ಬೆಡ್ರೂಮ್ನಲ್ಲಿ ಅವರ ಮೃತದೇಹ ಪತ್ತೆಯಾಗಿದೆ.

ಬೆಡ್ರೂಮ್ನಲ್ಲಿ ಸೀಲ್ ಆಗಿರುವ ಮಾನಾಕ್ಸೈಡ್ ಸಿಲಿಂಡರ್ ಪತ್ತೆಯಾಗಿದ್ದು, ಬಲವಂತವಾಗಿ ಯಾರೂ ಒಳ ಪ್ರವೇಶಿಸಿರುವ ಕುರುವು ಕಂಡುಬಂದಿಲ್ಲ. ಪ್ರತ್ಯುಷಾ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕೆ ವ್ಯಕ್ತವಾಗಿದ್ದು, ಅನುಮಾನಾಸ್ಪದ ಸಾವಿನ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಪ್ರತ್ಯುಷಾ ಅವರ ಹಠಾತ್ ಸಾವಿನಿಂದ ಫ್ಯಾಷನ್ ಲೋಕ ದಿಗ್ಬ್ರಾಂತವಾಗಿದ್ದು, ಪೊಲೀಸರ ಕೂಲಂಕುಶ ತನಿಖೆ ಬಳಿಕವೇ ಸಾವಿನ ಕಾರಣ ಗೊತ್ತಾಗಲಿದೆ.