alex Certify SP ಹೆಸರಲ್ಲಿ PSI ನಿಂದ 8.5 ಲಕ್ಷ ರೂ. ಪಡೆದಿದ್ದ ವಂಚಕ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SP ಹೆಸರಲ್ಲಿ PSI ನಿಂದ 8.5 ಲಕ್ಷ ರೂ. ಪಡೆದಿದ್ದ ವಂಚಕ ಅರೆಸ್ಟ್

ಕಲಬುರಗಿ: ಜಿಲ್ಲಾ ಪೊಲೀಸ್ ಅಧೀಕ್ಷಕರ ಹೆಸರು ಹೇಳಿ ಪಿಎಸ್ಐ ಅವರಿಂದ 8.5 ಲಕ್ಷ ರೂಪಾಯಿ ಪಡೆದಿದ್ದ ಆರೋಪಿಯನ್ನು ಬಂಧಿಸಲಾಗಿದೆ.

ಪಿಎಸ್ಐ ಮಂಜುನಾಥ ಹೂಗಾರ ಅವರಿಂದ 8.5 ಲಕ್ಷ ರೂಪಾಯಿ ಹಣ ಪಡೆಯಲಾಗಿದೆ. ಕಲಬುರ್ಗಿ ಜಿಲ್ಲೆ ಜೇವರ್ಗಿ ಠಾಣೆ ಪಿಎಸ್ಐ ಆಗಿದ್ದ ಹೂಗಾರ ಅವರು ತಿಂಗಳ ಹಿಂದೆ ಡಿಸಿಬಿಗೆ ವರ್ಗಾವಣೆಯಾಗಿದ್ದಾರೆ.

ಎಸ್ಪಿಯವರ ಪರ್ಸನಲ್ ನಂಬರ್ ಎಂದು ಹೇಳಿ ಎಸ್ಎಂಎಸ್ ಮಾಡುತ್ತಿದ್ದ ಕೊಂಡಗುಳಿ ಗ್ರಾಮದ ಖಾಸಿಂ ಪಟೇಲ್ ಬೇರೆ ಬೇರೆ ಕಾರಣ ಹೇಳಿ ಮೂರು ಬಾರಿ ಹಣ ಪಡೆದಿದ್ದ. ಫೆಬ್ರವರಿ 4 ರಂದು ಎಸ್ಪಿ ಭೇಟಿಯಾಗಿ ಹಣ ನೀಡಿದ ಬಗ್ಗೆ ಪಿಎಸ್ಐ ಮಾಹಿತಿ ನೀಡಿದ್ದಾರೆ. ನಾನು ಯಾವುದೇ ಹಣ ಕೇಳಿಲ್ಲ. ಅದು ನನ್ನ ನಂಬರ್ ಅಲ್ಲ ಎಂದು ಎಸ್ಪಿಯವರು ಪಿಎಸ್ಐಗೆ ತಿಳಿಸಿದ್ದಾರೆ.

ನಂತರ ಕಲ್ಬುರ್ಗಿ ಸ್ಟೇಷನ್ ಬಜಾರ್ ಠಾಣೆಗೆ ಪಿಎಸ್ಐ ದೂರು ನೀಡಿದ್ದು, ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನಿಂದ 2 ಲಕ್ಷ ರೂ. ವಶಕ್ಕೆ ಪಡೆಯಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...