ನವದೆಹಲಿ: ಕೃಷಿ ಕಾಯ್ದೆಗಳನ್ನು ವಿರೋಧಿಸಿ ಇಂದು ದೇಶವ್ಯಾಪಿ ರೈತರು ಹೋರಾಟ ಕೈಗೊಂಡಿದ್ದಾರೆ. ಕೇಂದ್ರದ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯ ಗಡಿಭಾಗದಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಇಂದಿಗೆ ಆರು ತಿಂಗಳು ಪೂರ್ಣಗೊಂಡಿದೆ.
ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಕಪ್ಪು ದಿನವನ್ನಾಗಿ ಆಚರಿಸಲು ರೈತರು ಮುಂದಾಗಿದ್ದು, ಕಪ್ಪು ಧ್ವಜಗಳನ್ನು ಪ್ರದರ್ಶಿಸುವ ಮೂಲಕ ಪ್ರತಿಭಟನೆ ನಡೆಸಲಿದ್ದಾರೆ ಎಂದು ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್ ತಿಳಿಸಿದ್ದಾರೆ.
ಕೊರೋನಾ ನಿರ್ಬಂಧದ ಕಾರಣದಿಂದ ಯಾವುದೇ ಸಾರ್ವಜನಿಕ ಸಭೆ, ಪ್ರತಿಭಟನೆ ಮೆರವಣಿಗೆ ನಡೆಸುವುದಿಲ್ಲ. ಜನರು ತಾವು ಇರುವ ಕಡೆಗಳಲ್ಲಿ ಕಪ್ಪು ಬಾವುಟ ಪ್ರದರ್ಶಿಸುವಂತೆ ಕರೆ ನೀಡಲಾಗಿದೆ. ಇದಕ್ಕಾಗಿಯೇ ಮಹಿಳಾ ಪ್ರತಿಭಟನಾಕಾರರು ಸಾವಿರಾರು ಕಪ್ಪು ಬಾವುಟಗಳನ್ನು ಸಿದ್ದಪಡಿಸಿದ್ದಾರೆ ಎಂದು ತಿಳಿಸಿದ್ದಾರೆ. ರೈತರ ದೇಶವ್ಯಾಪಿ ಹೋರಾಟಕ್ಕೆ ಕಾಂಗ್ರೆಸ್, ಜೆಡಿಎಸ್ ಸೇರಿದಂತೆ 12 ಪಕ್ಷಗಳು ಬೆಂಬಲ ನೀಡಿವೆ.