ಮಧ್ಯ ಪ್ರದೇಶದ ಸತ್ನಾ ಜಿಲ್ಲೆಯ ರೈತರ ಮನೆಗೆ ಸೇರಿದ ಅನೂಪ್ ಬಗ್ರೀ ಕೇಂದ್ರ ಲೋಕ ಸೇವಾ ಆಯೋಗದ ನಾಗರಿಕ ಸೇವಾ ಪರೀಕ್ಷೆಯಲ್ಲಿ 879ನೇ ರ‍್ಯಾಂಕ್ ಪಡೆದಿದ್ದಾರೆ. ಯುಪಿಎಸ್‌ಸಿಯಲ್ಲಿ ನಾಲ್ಕು ಬಾರಿ ಹಾಗೂ ಎಂಪಿಎಸ್‌ಸಿಯಲ್ಲಿ ಒಂದು ಬಾರಿ ಪ್ರಯತ್ನಿಸಿ ಯಶ ಕಾಣದೇ ಇದ್ದರೂ ಸಹ ಛಲ ಬಿಡದ ಅನೂಪ್ ತಮ್ಮ ಐದನೇ ಪ್ರಯತ್ನದಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ.
ಕೃಷಿಕ ಮಥುರಾ ಪ್ರಸಾದ್ ಹಾಗೂ ಗೃಹಿಣಿ ವಂದನಾರ ಪುತ್ರನಾದ 27 ವರ್ಷ ಅನೂಪ್ ತಮ್ಮ ಯುಪಿಎಸ್‌ಸಿ ಕನರನ್ನು ಸಾಕಾರಗೊಳಿಸಲು ಅನೇಕ ಕಷ್ಟಗಳನ್ನು ಎದುರಿಸಿದ್ದಾರೆ. ಏಳು ಎಕರೆ ಕೃಷಿ ಭೂಮಿಯಲ್ಲಿ ಜೀವನ ಸಾಗಿರುವ ಕುಟುಂಬ ಅನೂಪ್‌ರದ್ದು.
ನಾಗರಿಕ ಸೇವೆಯಲ್ಲಿ ಅತ್ಯುನ್ನತ ಹುದ್ದೆಯಾದ ಐಎಎಸ್ ಮೇಲೆ ಕಣ್ಣಿಟ್ಟಿರುವ ಅನೂಪ್, ಅದಕ್ಕಾಗಿ ಮತ್ತೊಂದು ಪ್ರಯತ್ನ ಮಾಡಲು ಸಜ್ಜಾಗಿದ್ದಾರೆ.
ಪ್ರತಿನಿತ್ಯ ನಿರಂತರವಾಗಿ 6-7 ಗಂಟೆಗಳ ಅಧ್ಯಯನ ಮಾಡುವ ಅನೂಪ್, ತಮ್ಮ ಶಿಕ್ಷಣ ಮುಗಿಯುತ್ತಲೇ ಯುಪಿಎಸ್‌ಸಿ ಕೋಚಿಂಗ್‌ಗಾಗಿ ದೆಹಲಿಗೆ ತೆರಳಿದ್ದರು.