ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದಲ್ಲಿ ಭಾರತ ಸರ್ಕಾರವು ಹತ್ತಿಯ ಎರಡು ಮೂಲ ತಳಿಗಳ ಬೆಂಬಲ ಬೆಲೆಯನ್ನು ನಿಗದಿಪಡಿಸಿದೆ.
ಅವುಗಳೆಂದರೆ ಮಧ್ಯಮ ಸ್ಟೇಪಲ್ ಹತ್ತಿ 24.5 ರಿಂದ 25.5 ಮಿಮೀ ಉದ್ದವನ್ನು ಹೊಂದಿರುವ ಮೈಕ್ರೊನೈರ್ ಮೌಲ್ಯವು 4.3 ರಿಂದ 5.1 ಮತ್ತು ಉದ್ದವಾದ ಹತ್ತಿಗೆ ಸ್ಟೇಪಲ್. ಹತ್ತಿ ಸೀಸನ್ 2023-24 (ಅಕ್ಟೋಬರ್-ಸೆಪ್ಟೆಂಬರ್) ಫೇರ್ ಎವರೇಜ್ ಕ್ವಾಲಿಟಿಯ (ಎಫ್‍ಎಕ್ಯೂ) ನ್ಯೂ ಕ್ರಾಪ್ ಸೀಡ್ ಕಾಟನ್ (ಕಪಾಸ್) 3.5 ರಿಂದ 4.3 ಮೈಕ್ರೋನೈರ್ ಮೌಲ್ಯದೊಂದಿಗೆ 29.5 ರಿಂದ 30.5 ಮಿಮೀ ಉದ್ದ. ಮಧ್ಯಮ ಹತ್ತಿಯ ಬೆಂಬಲ ಬೆಲೆಯನ್ನು ಕ್ವಿಂಟಾಲ್‍ಗೆ ರೂ. 6,620/-ಕ್ಕೆ ನಿಗದಿಪಡಿಸಲಾಗಿದೆ ಮತ್ತು ಉದ್ದವಾದ ಸ್ಟೇಪಲ್ ಹತ್ತಿಗೆ ರೂ.7,020/- ಕ್ವಿಂಟಾಲ್‍ಗೆ ನಿಗದಿಪಡಿಸಲಾಗಿದೆ.
ಹತ್ತಿ ಖರೀದಿ ಕೇಂದ್ರಗಳ ವಿಳಾಸ: ಶ್ರೀ ಲಕ್ಷ್ಮೀ ಕಾಟನ್ಸ್, ಪ್ಲಾಟ್ ನಂ: 135, 3ನೇ ಬೇಲೂರು ಇಂಡಸ್ಟ್ರೀಯಲ್ ಏರಿಯಾ, ಧಾರವಾಡ 580011 ಮತ್ತು ಮೆ|| ಅನಿಲಕುಮಾರ ಆ್ಯಂಡ್ ಕಂಪನಿ ಅಮ್ಮಿನಭಾವಿ ಧಾರವಾಡ 580201 ಹತ್ತಿ ಖರೀದಿ ಕೇಂದ್ರಗಳಿಗೆ ಭೇಟಿ ನೀಡಬಹುದು.
ಹೆಚ್ಚಿನ ಮಾಹಿತಿಗಾಗಿ ಧಾರವಾಡ ಭಾರತೀಯ ಹತ್ತಿ ನಿಗಮ ಲಿ. ವ್ಯವಸ್ಥಾಪಕ ಪ್ರಮೋದ ಇವರ ಮೊ.ಸಂ. 9028155111 ಸಂಪರ್ಕಿಸಬಹುದು. ಹಾಗೂ ಹತ್ತಿ ಖರೀದಿ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಪಡೆಯಬಹುದು ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಪ್ರಕಟಣೆ ತಿಳಿಸಿದೆ.