ಬೆಂಗಳೂರು: ರಾಜ್ಯದಲ್ಲಿ ಬಿತ್ತನೆ ಬೀಜಕ್ಕೆ ಕ್ಯೂಆರ್ ಕೋಡ್ ಕಡ್ಡಾಯಗೊಳಿಸಲಾಗಿದೆ. ರೈತರಿಗೆ ವಂಚನೆ ತಡೆಯಲು ಕೃಷಿ ಇಲಾಖೆ ಕ್ರಮ ಕೈಗೊಂಡಿದ್ದು, ಪ್ರಾಮಾಣಿಕೃತ ಉತ್ತಮ ಗುಣಮಟ್ಟದ ಬಿತ್ತನೆ ಬೀಜಗಳನ್ನು ಪೂರೈಸಲು ಕ್ರಮ ಕೈಗೊಳ್ಳಲಾಗಿದೆ.
ನಕಲಿ ಹಾವಳಿ ತಡೆಯಲು ಪ್ರಸಕ್ತ ಮುಂಗಾರು ಹಂಗಾಮಿನಿಂದಲೇ ಬಿತ್ತನೆ ಬೀಜಗಳ ಪ್ಯಾಕೆಟ್ ಮೇಲೆ ಕೋಡ್ ಕಡ್ಡಾಯಗೊಳಿಸಲಾಗಿದೆ. ಸಂಬಂಧಿಸಿದೆ ಅಧಿಕಾರಿಗಳು ಬಿತ್ತನೆ ಬೀಜಗಳನ್ನು ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡುವ ಮೊದಲು ಬೀಜಗಳ ಪ್ಯಾಕೆಟ್ ಗಳ ಮೇಲೆ ಕೋಡ್ ನಮೂದಿಸುವುದನ್ನು ಖಚಿತಪಡಿಸಿಕೊಳ್ಳಬೇಕಿದೆ.
ಈಗಾಗಲೇ ಅನೇಕ ಜಿಲ್ಲೆಗಳಲ್ಲಿ ಮುಂಗಾರು ಬಿತ್ತನೆ ಕಾರ್ಯ ಶುರುವಾಗಿದೆ. ಇದಕ್ಕೆ ಅಗತ್ಯವಾದ ಬೀಜ ರಸಗೊಬ್ಬರ ಮಾರಾಟಕ್ಕೆ ರೈತ ಸಂಪರ್ಕ ಕೇಂದ್ರಗಳನ್ನು ತೆರೆದು ಸಬ್ಸಿಡಿ ದರದಲ್ಲಿ ಬೀಜ ಗೊಬ್ಬರ ವಿತರಿಸಲಾಗುವುದು. ಮೇ ಎರಡು ಅಥವಾ ಮೂರನೇ ವಾರದಲ್ಲಿ ರೈತ ಸಂಪರ್ಕ ಕೇಂದ್ರಗಳ ಮೂಲಕ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಕ್ಯೂಆರ್ ಕೋಡ್ ಪರಿಶೀಲಿಸದೆ ಬಿತ್ತನೆ ಬೀಜ ವಿತರಿಸುವಂತಿಲ್ಲ ಎಂದು ಹೇಳಲಾಗಿದೆ.