
ಚಿತ್ರದುರ್ಗ: ಕೇಂದ್ರ ಸರ್ಕಾರದ ಬೆಂಬಲಬೆಲೆ ಯೋಜನೆಯಡಿ 2024-25ನೇ ಸಾಲಿನಲ್ಲಿ ರೈತರು ಬೆಳೆದ ತೊಗರಿ ಹಾಗೂ ಕಡಲೇಕಾಳು ಖರೀದಿ ಮಾಡಲು ಎನ್‍ಸಿಸಿಎಫ್ ಸಂಸ್ಥೆಯ ಪರವಾಗಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ ನಿಯಮಿತ ಪರವಾಗಿ ಜಿಲ್ಲೆಯ ಪಿಎಸಿಎಸ್, ಎಫ್‍ಪಿಒ, ಟಿಎಪಿಸಿಎಂಎಸ್‍ಗಳ ಮೂಲಕ ಖರೀದಿ ಕೇಂದ್ರಗಳನ್ನು ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಆರಂಭಿಸಲಾಗಿದ್ದು, ಇದೇ ಫೆ.17ರಿಂದ ರೈತರಿಂದ ನೋಂದಣಿ ಪ್ರಾರಂಭವಾಗಲಿದೆ.
ರೈತರು ಆಧಾರ್ ಪ್ರತಿಯೊಂದಿಗೆ ನೋಂದಾವಣಿ ಕೇಂದ್ರಗಳಲ್ಲಿ ನೋಂದಾವಣಿ ಮಾಡಿಸಬೇಕಾಗಿರುತ್ತದೆ. ಮಾರ್ಚ್ 30 ನೋಂದಣಿಗೆ ಕೊನೆಯ ದಿನವಾಗಿದೆ.
ಪ್ರತಿ ರೈತರಿಂದ ಎಕರೆಗೆ ತೋಗರಿಯು 4 ಕ್ವಿಂಟಾಲ್‍ನಂತೆ ಗರಿಷ್ಟ ಮಿತಿಯು 40 ಕ್ವಿಂಟಾಲ್ ಪ್ರಮಾಣವಿರುತ್ತದೆ. ಕೇಂದ್ರ ಸರ್ಕಾರವು ಪ್ರತಿ ಕ್ವಿಂಟಾಲ್‍ಗೆ 7550 ರೂ. ನಿಗದಿಪಡಿಸಿರುತ್ತದೆ.
ಪ್ರತಿ ರೈತರಿಂದ ಎಕರೆಗೆ ಕಡಲೇಕಾಳು 4 ಕ್ವಿಂಟಾಲ್‍ನಂತೆ ಗರಿಷ್ಟ ಮಿತಿಯು 20 ಕ್ವಿಂಟಾಲ್ ಪ್ರಮಾಣವಿರುತ್ತದೆ. ಕೇಂದ್ರ ಸರ್ಕಾರವು ಪ್ರತಿ ಕ್ವಿಂಟಾಲ್‍ಗೆ 5650 ರೂ.ನಿಗದಿಪಡಿಸಿದೆ.
ಖರೀದಿ ಕೇಂದ್ರಗಳ ವಿವರ:
ಚಿತ್ರದುರ್ಗ ತಾಲ್ಲೂಕಿನಲ್ಲಿ ಚಿತ್ರದುರ್ಗ ನಗರದ ಪಿಎಸಿಎಸ್, ಮಾಡನಾಯಕನಹಳ್ಳಿ, ಚಿಕ್ಕಗೊಂಡನಹಳ್ಳಿ ಪಿಎಸಿಎಸ್ ಹಾಗೂ ಶ್ರೀ ಮಂಜುನಾಥಸ್ವಾಮಿ ಎಫ್‍ಪಿಒ, ಚಳ್ಳಕೆರೆ ತಾಲ್ಲೂಕಿನ ರಾಮಜೋಗಿಹಳ್ಳಿ, ಚಿಕ್ಕಮಧುರೆ ಪಿಎಸಿಎಸ್, ಹಿರಿಯೂರು ತಾಲ್ಲೂಕಿನ ಭರಂಪುರ, ಮರಡಿಹಳ್ಳಿ, ಬಬ್ಬೂರು ಪಿಎಸಿಎಸ್, ಹೊಳಲ್ಕೆರೆ ತಾಲ್ಲೂಕಿನ ರಾಮಗಿರಿ ಪಿಎಸಿಎಸ್, ಮೊಳಕಾಲ್ಮುರಿನ ಟಿಎಪಿಸಿಎಂಎಸ್ ಹಾಗೂ ಹೊಸದುರ್ಗ ತಾಲ್ಲೂಕಿನಲ್ಲಿ ಶ್ರೀ ರಾಮಲಿಂಗೇಶ್ವರ ಹಾರ್ಟಿಕಲ್ಚರ್ ಫಾರ್ಮರ್ಸ್‍ನಲ್ಲಿ ಖರೀದಿ ಕೇಂದ್ರ ಪ್ರಾರಂಭಿಸಲಾಗಿದ್ದು, ಜಿಲ್ಲೆಯ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಚಿತ್ರದುರ್ಗ ಶಾಖಾ ವ್ಯವಸ್ಥಾಪಕ ಎಸ್.ಬಸವೇಶ್ ನಾಡಿಗರ್ ತಿಳಿಸಿದ್ದಾರೆ.