ಬೆಂಗಳೂರು: ರೈತರನ್ನು ಸ್ವಾವಲಂಬಿಗಳನ್ನಾಗಿಸುವ ಉದ್ದೇಶದಿಂದ ಕೃಷಿ ವಲಯದಲ್ಲಿ ನವೀಕರಿಸಬಹುದಾದ ಶಕ್ತಿಯ ಬಳಕೆಯನ್ನು ಹೆಚ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ನಲ್ಲಿ ಪ್ರಸ್ತಾಪಿಸಲಾಗಿದೆ.
40,000 ಆಫ್ ಗ್ರಿಡ್ ಸೋಲಾರ್ ಪಂಪ್ಸೆಟ್ ಗಳನ್ನು ಸ್ಥಾಪಿಸುವುದಾಗಿ ಸಿಎಂ ಘೋಷಿಸಿದ್ದಾರೆ. ಕೇಂದ್ರ ಸರ್ಕಾರ ಶೇಕಡ 30ರಷ್ಟು ಪಾಲು ನೀಡಲಿದ್ದು, ರಾಜ್ಯ ಸರ್ಕಾರದ ವತಿಯಿಂದ ನೀಡುವ ಸಹಾಯಧನವನ್ನು ಶೇಕಡ 30 ರಿಂದ ಶೇಕಡ 50ಕ್ಕೆ ಹೆಚ್ಚಳ ಮಾಡಲಾಗಿದೆ.
ಕೃಷಿ ಪಂಪ್ಸೆಟ್ ಫೀಡರ್ ಸೋಲಾರೈಸೇಶನ್ ಯೋಜನೆ ಹಂತ-1ರ ಅಡಿಯಲ್ಲಿ 3.37 ಲಕ್ಷ ರೈತರಿಗೆ ಅನುಕೂಲವಾಗುವಂತೆ ವಿಕೇಂದ್ರೀಕೃತ ರೀತಿಯಲ್ಲಿ 1320 ಮೆಗಾ ವ್ಯಾಟ್ ಶಕ್ತಿ ಉತ್ಪಾದಿಸಲಾಗುತ್ತಿದೆ. ಮುಂದಿನ ಹಂತದಲ್ಲಿ 4.30 ಲಕ್ಷ ನೀರಾವರಿ ಪಂಪ್ಸೆಟ್ ಗಳಿಗೆ ಶಕ್ತಿ ನೀಡಲು 1192 ಮೆಗಾ ವ್ಯಾಟ್ ಸೋಲಾರ್ ಯೋಜನೆಗಳನ್ನು ಜಾರಿಗೆ ತರಲು ನಿರ್ಧರಿಸಿದೆ ಎಂದು ಮುಖ್ಯಮಂತ್ರಿಗಳು ಘೋಷಣೆ ಮಾಡಿದ್ದಾರೆ.