alex Certify ರೈತರ ವಿದ್ಯುತ್ ಸಮಸ್ಯೆಗೆ ಟೋಲ್ ಫ್ರೀ ನಂಬರ್, ತಕ್ಷಣವೇ ಸ್ಪಂದಿಸಲು ಸಚಿವ ಸಂತೋಷ್ ಲಾಡ್ ಸೂಚನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈತರ ವಿದ್ಯುತ್ ಸಮಸ್ಯೆಗೆ ಟೋಲ್ ಫ್ರೀ ನಂಬರ್, ತಕ್ಷಣವೇ ಸ್ಪಂದಿಸಲು ಸಚಿವ ಸಂತೋಷ್ ಲಾಡ್ ಸೂಚನೆ

ಧಾರವಾಡ: ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ರೈತರ ವಿದ್ಯುತ್ ಸಂಬಂಧಿಸಿದ ಅಹವಾಲುಗಳಿಗೆ ತಕ್ಷಣವೇ ಸ್ಪಂಧಿಸುವಂತೆ ಕಾರ್ಮಿಕ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರು ಹೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯ ನೂತನ ಸಭಾಂಗಣದಲ್ಲಿ ಜಿಲ್ಲೆಯ ವಿದ್ಯುತ್ ಸರಬರಾಜು ಸ್ಥಿತಿಗತಿ ಕುರಿತು ಹೆಸ್ಕಾಂ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಟ್ರಾನ್ಸಫಾರ್ಮರ್ ಗಳು ಸುಟ್ಟಾಗ ಅಧಿಕಾರಿಗಳು ತಕ್ಷಣವೇ ಕ್ರಮ ಕೈಗೊಳ್ಳತಕ್ಕದ್ದು. ರೈತರು ಅಹವಾಲು ಸಲ್ಲಿಸಲು 1912 ಟೋಲ್ ಫ್ರೀ ದೂರವಾಣಿಗೆ ಬರುವ ಅಹವಾಲುಗಳನ್ನು ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ತಕ್ಷಣವೇ ಸ್ಪಂದಿಸುವಂತೆ ತಿಳಿಸಿದರು.

ಟ್ರಾನ್ಸಫಾರ್ಮರ್ ಗಳು ಸುಟ್ಟ ತಕ್ಷಣವೇ ರೈತರೇ ಫೋನ್ ಮಾಡಿ ತಿಳಿಸುವುದಕ್ಕಿಂತ ಮುಂಚೆಯೇ ಹೆಸ್ಕಾಂ ಇಲಾಖೆಗೆ ನೇರವಾಗಿ ತಿಳಿಯುವಂತೆ ತಂತ್ರಜ್ಞಾನವನ್ನು ರೂಪಿಸುವಂತೆ ಸೂಚಿಸಿದರು.

ಅಕ್ರಮ-ಸಕ್ರಮ ಪಂಪ್‍ಸೆಟ್ ಯೋಜನೆಯಡಿ ಟ್ರಾನ್ಸಫಾರ್ಮರ್ ದ 500 ಮೀ ಅಂತರದೊಳಗಿರುವ ಪಂಪ್‍ಸೆಟ್ ಮಾಲಿಕರು 10 ಸಾವಿರ ರೂ. ತುಂಬಿದವರಿಗೆ ಸಕ್ರಮ ಮಾಡುವ ಯೋಜನೆಯ ಲಾಭ ರೈತರಿಗೆ ದೊರೆಯಲಿದೆ. 500 ಮೀ ಅಂತರ ಮೇಲ್ಪಟವರಿಗೆ ಸೋಲಾರ್ ಅಳವಡಿಸಲಾಗುವುದು. ಜಿಲ್ಲೆಯಲ್ಲಿ ಸುಮಾರು 8 ರಿಂದ 10 ಸಾವಿರ ರೈತರು ಇದರ ಲಾಭ ಪಡೆಯಲಿದ್ದಾರೆಂದು ಸಚಿವರು ತಿಳಿಸಿದರು.

ಆಧುನಿಕ ತಂತ್ರಜ್ಞಾನದ ಇಂದಿನ ಯುಗದಲ್ಲಿ ಹೆಸ್ಕಾಂ ಅಧಿಕಾರಿಗಳು ದಶಕಗಳ ಮುಂದಾಲೋಚನೆ ಇಟ್ಟುಕೊಂಡು ತಾಂತ್ರಿಕತೆಯನ್ನು ಬಳಸಬೇಕು. ವಿದ್ಯುತ್ ಸಂಬಂಧಿಸಿದ ಯಾವುದೇ ಸಮಸ್ಯೆಯನ್ನು ಪರಿಹರಿಸಲು ತಾಂತ್ರಿಕ ಸಿಬ್ಬಂದಿಗಳು 24*7 ಸಿದ್ದರಿರಬೇಕೆಂದು ಅವರು ಸೂಚಿಸಿದರು.

ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್ ರೋಶನ್ ಮಾತನಾಡಿದರು. ಪ್ರಭಾರ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಹಾಗೂ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಸೇರಿದಂತೆ ಹೆಸ್ಕಾಂ ಅಧಿಕಾರಿಗಳು ಉಪಸ್ಥಿತರಿದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...