ನವದೆಹಲಿ: ಜನವರಿ 19 ರಂದು ರೈತರು ಮತ್ತು ಕೇಂದ್ರ ಸರ್ಕಾರದೊಂದಿಗೆ ಮತ್ತೊಂದು ಸುತ್ತಿನ ಸಂಧಾನ ಸಭೆ ನಡೆಯಲಿದೆ.
ರೈತ ಸಂಘಟನೆಗಳು ಮತ್ತು ಕೇಂದ್ರ ಸರ್ಕಾರದ ನಡುವೆ ಇಂದು ನಡೆದ ಸಂಧಾನ ಸಭೆ ವಿಫಲವಾಗಿದೆ. ಇವತ್ತು 9 ನೇ ಸುತ್ತಿನ ಸಂಧಾನ ಸಭೆ ಆಯೋಜಿಸಲಾಗಿತ್ತು. ರೈತರೊಂದಿಗೆ ನಡೆದ ಇಂದಿನ ಸಭೆ ಸಫಲವಾಗಿಲ್ಲ. ಹೀಗಾಗಿ ಜನವರಿ 19 ರಂದು ಮತ್ತೊಂದು ಸುತ್ತಿನ ಸಭೆ ನಡೆಸಲಾಗುವುದು.
ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಈ ಕುರಿತು ಮಾತನಾಡಿ, ಮಾತುಕತೆಯ ಮೂಲಕ ಸಮಸ್ಯೆ ಇತ್ಯರ್ಥಕ್ಕೆ ಯತ್ನಿಸುತ್ತಿದ್ದೇವೆ. ತೀವ್ರವಾದ ಚಳಿಯಲ್ಲಿ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ಇದಕ್ಕೆ ಕೇಂದ್ರ ಸರ್ಕಾರ ಕಳವಳ ವ್ಯಕ್ತಪಡಿಸಿದೆ ಎಂದು ತಿಳಿಸಿದ್ದಾರೆ.