ಲಖನೌ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಮಾಜವಾದಿ ಪಕ್ಷ ಭರ್ಜರಿ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದೆ.
ಪಕ್ಷದ ಅಧ್ಯಕ್ಷ ಅಖಿಲೇಶ್ ಸಿಂಗ್ ಯಾದವ್ ಅವರು ಪ್ರಣಾಳಿಕೆ ಬಿಡುಗಡೆ ಮಾಡಿ ಬಡ ರೈತರಿಗೆ 5000 ರೂ. ಪಿಂಚಣಿ ನೀಡುವುದಾಗಿ ಭರವಸೆ ನೀಡಿದ್ದಾರೆ. ಸೇನಾ ನೇಮಕಾತಿಗಾಗಿ ಜಾರಿಗೆ ತಂದ ಅಗ್ನಿವೀರ್ ಯೋಜನೆ ರದ್ದುಪಡಿಸಲಾಗುವುದು. ಒಬಿಸಿ, ಎಸ್.ಸಿ., ಎಸ್.ಟಿ. ವರ್ಗದವರಿಗೆ ಸರ್ಕಾರಿ ಹುದ್ದೆ ನೀಡಲಾಗುವುದು ಎಂದು ಹೇಳಿದ್ದಾರೆ.
ಮಹಿಳೆಯರಿಗೆ ಶಾಸನಸಭೆಗಳಲ್ಲಿ ಶೇಕಡ 33 ರಷ್ಟು ಮೀಸಲಾತಿ, ಸಣ್ಣ ರೈತರಿಗೆ ಮಾಸಿಕ 5,000 ರೂ. ಪಿಂಚಣಿ, ಬಡವರಿಗೆ ಉಚಿತ ಪಡಿತರ, ರೇಷನ್ ಕಾರ್ಡ್ ಹೊಂದಿದವರಿಗೆ ಮಾಸಿಕ 500 ರೂಪಾಯಿ ಮೊತ್ತ ಮೊಬೈಲ್ ಡೇಟಾ ನೀಡಲಾಗುವುದು ಎಂದು ತಿಳಿಸಿದ್ದಾರೆ.