ಕೊಪ್ಪಳ: ಜೆಡಿಎಸ್ ಅಧಿಕಾರಕ್ಕೆ ಬಂದರೆ ವೃದ್ಧರಿಗೆ ಪ್ರತಿ ಎಕರೆ ಜಮೀನಿಗೆ ಪ್ರತಿ ವರ್ಷ 10,000 ರೂ. ಆರ್ಥಿಕ ನೆರವು ನೀಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಘೋಷಿಸಿದ್ದಾರೆ.
ಕುಷ್ಟಗಿ ಕ್ಷೇತ್ರದ ತಾವರಾಗೇರಾದಲ್ಲಿ ಮಾತನಾಡಿದ ಹೆಚ್.ಡಿ.ಕೆ., ವೃದ್ಧಾಪ್ಯ ವೇತನ 5 ಸಾವಿರ ರೂ.ಗೆ ಹೆಚ್ಚಳ ಮಾಡಲಾಗುವುದು. ವಿಧವಾ ವೇತನವನ್ನು 2,500 ರೂಪಾಯಿಗೆ ಹೆಚ್ಚಳ ಮಾಡಲಿದ್ದು, ಯುವಕರಿಗೆ ಉದ್ಯೋಗ ಒದಗಿಸಲಾಗುವುದು ಎಂದು ಹೇಳಿದ್ದಾರೆ.
ರಾಜ್ಯದ ರೈತರನ್ನು ಸಾಲಮುಕ್ತಗೊಳಿಸಲಾಗುವುದು. ಹಳ್ಳಿಗಳ ಅಭಿವೃದ್ಧಿ ಸ್ವಸಹಾಯ ಸಂಘಗಳ ಸಾಲ ಮನ್ನಾ ಮಾಡಲಾಗುವುದು. ಇದೊಂದು ಬಾರಿ ನನಗೆ ಸಂಪೂರ್ಣ ಅಧಿಕಾರ ನೀಡಿ. ನಾನು ನೀಡುವ ಭರವಸೆ ಹೇಳಿದ್ದಕ್ಕೆ 2.5 ಲಕ್ಷ ಕೋಟಿ ರೂ. ಬೇಕಿದೆ ಎಂದು ತಿಳಿಸಿದ್ದಾರೆ.