ಬೆಂಗಳೂರು: ರೈತರು ಹೊಂದಿರುವ ಭೂಮಿ ಬೆಳೆಯುವ ಬೆಳೆ ಆಧರಿಸಿ ಶೂನ್ಯ ಬಡ್ಡಿ ದರದಲ್ಲಿ 5 ಲಕ್ಷ ರೂಪಾಯಿವರೆಗೆ ಸಾಲ ನೀಡಲಾಗುವುದು. ಕೇವಲ ಭೂಮಿ ಇದ್ದ ಮಾತ್ರಕ್ಕೆ 5 ಲಕ್ಷ ರೂ. ಬೆಳೆ ಸಾಲ ನೀಡುವುದಿಲ್ಲ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಸ್ಪಷ್ಟನೆ ನೀಡಿದ್ದಾರೆ.
ವಿಧಾನ ಪರಿಷತ್ ನಲ್ಲಿ ಕಾಂಗ್ರೆಸ್ ಸದಸ್ಯ ದಿನೇಶ್ ಗೂಳಿಗೌಡ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಭೂಮಿ ಇದ್ದ ಮಾತ್ರಕ್ಕೆ ಸಾಲ ಕೊಡುವುದಿಲ್ಲ. ಬೆಳೆಯುವ ಬೆಳೆ, ರೈತರು ಹೊಂದಿರುವ ಭೂಮಿ ಆಧರಿಸಿ ಸಾಲ ನೀಡಲಾಗುವುದು ಎಂದು ಹೇಳಿದ್ದಾರೆ.
2024 -25 ನೇ ಸಾಲಿನಲ್ಲಿ 35.10 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ 25,000 ಕೋಟಿ ರೂ. ಸಾಲ ಅಲ್ಪಾವಧಿ ಕೃಷಿ ಸಾಲ ಮತ್ತು ಪಶು ಸಂಗೋಪನೆಗೆ ದುಡಿಯುವ ಬಂಡವಾಳ ಸಾಲ ವಿತರಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದ್ದಾರೆ.