ಬೆಂಗಳೂರು: ಇ- ಫೈಲಿಂಗ್ ಸೇವೆಗೂ ಮೊದಲೇ ಕೃಷಿ ಸಾಲ ಪಡೆದ ರೈತರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಕೃಷಿ ಸಾಲಕ್ಕೆ ಸಂಬಂಧಿಸಿದ ಇ -ಫೈಲಿಂಗ್ ಸೇವೆ ಜಾರಿಗೆ ಮೊದಲು ಸಾಲ ಪಡೆದು ಘೋಷಣಾ ಪತ್ರ ಸಲ್ಲಿಸಿದವರು ಖುದ್ದಾಗಿ ಸಬ್ ರಿಜಿಸ್ಟ್ರಾರ್ ಕಚೇರಿಗೆ ಆಗಮಿಸಿ ಸಾಲ ತೀರುವಳಿ ಪತ್ರ ಸಲ್ಲಿಸಬೇಕು ಎಂದು ತಿಳಿಸಲಾಗಿದೆ.
ಕೃಷಿ ಸಾಲ ಒದಗಿಸುವ ಫ್ರೂಟ್ಸ್ ತಂತ್ರಾಂಶ, ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾವೇರಿ ತಂತ್ರಾಂಶವನ್ನು ಸಂಯೋಜನೆ ಮಾಡಲಾಗಿದ್ದು, ಕೃಷಿ ಸಾಲ ಪಡೆದ ರೈತರು ಘೋಷಣೆ ಪತ್ರ ಹಾಗೂ ಮರು ಪಾವತಿ ಮಾಡಿದ ನಂತರ ಸಾಲ ತೀರುವಳಿ ಪತ್ರವನ್ನು ಸಬ್ ರಿಜಿಸ್ಟ್ರಾರ್ ಕಚೇರಿಗೆ ಬಂದು ನೀಡುವ ವ್ಯವಸ್ಥೆಯನ್ನು ಸ್ಥಗಿತ ಮಾಡಿದ್ದಾರೆ.
ಆದರೆ, ಇ – ಫೈಲಿಂಗ್ ಸೇವೆಗೂ ಮೊದಲು ಕೃಷಿ ಸಾಲ ಪಡೆದ ರೈತರ ಘೋಷಣೆ ಪತ್ರವನ್ನು ಸಲ್ಲಿಸಿದ್ದರೆ, ಅಂತಹ ರೈತರು ಸಬ್ ರಿಜಿಸ್ಟ್ರಾರ್ ಕಚೇರಿಗೆ ಆಗಮಿಸಿ ಸಾಲ ತೀರುವಳಿ ಪ್ರಮಾಣ ಪತ್ರವನ್ನು ಸಲ್ಲಿಸಬೇಕಿದೆ.
ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆಯುಕ್ತರು ಈ ಬಗ್ಗೆ ಸ್ಪಷ್ಟಪಡಿಸಿದ್ದು, ಫ್ರೂಟ್ಸ್ ತಂತ್ರಾಂಶ, ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾವೇರಿ ತಂತ್ರಾಂಶವನ್ನು ಸಂಯೋಜನೆಗೂ ಮೊದಲು ಸಾಲ ಪಡೆದವರು ಸಾಲ ತೀರುವಳಿ ಪತ್ರವನ್ನು ಭೌತಿಕವಾಗಿ ಫೈಲಿಂಗ್ ಮಾಡಬೇಕೆಂದು ತಿಳಿಸಲಾಗಿದೆ.