alex Certify ರೈತರಿಗೆ ಮತ್ತೊಂದು ಗುಡ್ ನ್ಯೂಸ್: ಕೃಷಿ ಇಲಾಖೆಯಿಂದ ಸಹಾಯಧನ ಸೌಲಭ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈತರಿಗೆ ಮತ್ತೊಂದು ಗುಡ್ ನ್ಯೂಸ್: ಕೃಷಿ ಇಲಾಖೆಯಿಂದ ಸಹಾಯಧನ ಸೌಲಭ್ಯ

ಶಿವಮೊಗ್ಗ: 2021-22 ನೇ ಸಾಲಿನಲ್ಲಿ ಕೃಷಿ ಇಲಾಖೆ ವತಿಯಿಂದ ಕೆಳಕಂಡ ಯೋಜನೆಗಳಲ್ಲಿ ಸಹಾಯಧನದಡಿ ವಿವಿಧ  ಘಟಕಗಳನ್ನು ರೈತರು ಪಡೆದುಕೊಳ್ಳಬಹುದಾಗಿದೆ.

ಸೂಕ್ಷ್ಮ ನೀರಾವರಿ ಯೋಜನೆಯಡಿ ಪರಿಶಿಷ್ಟ ಜಾತಿಯ ರೈತರಿಗೆ ಶೇ.90 ರ ಸಹಾಯಧನದಡಿ ಸ್ಪ್ರಿಂಕ್ಲರ್ ಸೆಟ್ ವಿತರಣೆ ಮಾಡಲಾಗುವುದು. ಕೃಷಿ ಸಂಸ್ಕರಣೆ ಯೋಜನೆಯಡಿ ಸಾಮಾನ್ಯ ವರ್ಗದವರಿಗೆ ಶೇ.50 ರ ಸಹಾಯಧನದಡಿ ಹಿಟ್ಟಿನ ಗಿರಣಿ, ಪಲ್ವರೈಸರ್, ರಾಗಿ ಕ್ಲೀನಿಂಗ್ ಯಂತ್ರಗಳ ವಿತರಣೆ ಹಾಗೂ ಶೇ.75 ರ ಸಹಾಯಧನದಲ್ಲಿ ಸಣ್ಣ ಯಂತ್ರಚಾಲಿತ ಎಣ್ಣೆಗಾಣಗಳ ವಿತರಣೆ ಮಾಡಲಾಗುವುದು.

ಮೇಲ್ಕಂಡ ಘಟಕಗಳನ್ನು ಪಡೆಯಲು ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರಕ್ಕೆ ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು. ಕನಿಷ್ಟ 1 ಎಕರೆ ಜಮೀನು ಇರಲೇಬೇಕು. ಈ ಹಿಂದಿನ 7 ವರ್ಷದಲ್ಲಿ ಸದರಿ ಘಟಕವನ್ನು ಸಹಾಯಧನದಡಿ ಪಡೆದಿರಬಾರದು. ಪ.ಜಾ ರೈತರು ಕಡ್ಡಾಯವಾಗಿ ಆರ್.ಡಿ ಸಂಖ್ಯೆ ಇರುವ ಜಾತಿ ಪ್ರಮಾಣ ಪತ್ರವನ್ನು ಲಗತ್ತಿಸಬೇಕು. ರೈತರು ಈ ಸೌಲಭ್ಯಗಳನ್ನು ಪಡೆಯಬೇಕೆಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...