alex Certify ರಾಜ್ಯದ ರೈತರೇ ಗಮನಿಸಿ : `ಬರ ಪರಿಹಾರ’ ಪಡೆಯಲು `FID’ ಕಾರ್ಡ್ ಕಡ್ಡಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯದ ರೈತರೇ ಗಮನಿಸಿ : `ಬರ ಪರಿಹಾರ’ ಪಡೆಯಲು `FID’ ಕಾರ್ಡ್ ಕಡ್ಡಾಯ

ಬೆಂಗಳೂರು : ಬೆಳೆ ವಿಮೆ ನೋಂದಣಿಗೆ, ಕನಿಷ್ಟ ಬೆಂಬಲ ಬೆಲೆಯಲ್ಲಿ ಕೃಷಿ ಉತ್ಪನ್ನ ಮಾರಾಟ ಮಾಡಲು, ಬೆಳೆ  ಸಾಲ ಪಡೆಯಲು, ಬೆಳೆ ಹಾನಿಗೆ ಪರಿಹಾರ ಪಡೆಯಲು ಹಾಗೂ ಇತರೆ ಸೌಲಭ್ಯ ಪಡೆಯಲು ರೈತರ ಗುರುತಿನ ಸಂಖ್ಯೆ (ಎಫ್‍ಐಡಿ) ಕಡ್ಡಾಯವಾಗಿದೆ.

ಪ್ರತಿಯೊಬ್ಬ ರೈತರು ಕಡ್ಡಾಯವಾಗಿ ಎಫ್.ಐ.ಡಿ. ಮಾಡಿಸಿಕೊಳ್ಳಬೇಕು. ಎಫ್.ಐ.ಡಿ. ಈಗಾಗಲೇ ಆಗಿದ್ದಲ್ಲಿ ನಿಮಗೆ ಸಂಬಂಧಿಸಿದ ಎಲ್ಲಾ ಸರ್ವೆ ನಂಬರ್‌ಗಳು ಜೋಡಣೆಯಾಗಿದೆಯೋ ಅಥವಾ ಇಲ್ಲವೋ  ಎಂದು ಕೂಡಲೇ ಪರಿಶೀಲಿಸಿಕೊಳ್ಳಿ. ಜಂಟಿ ಖಾತೆದಾರರಾಗಿದ್ದಲ್ಲಿ ಪ್ರತಿಯೊಬ್ಬ ಎಂದು ಖಾತೆದಾರರ ಪ್ರತ್ಯೇಕವಾಗಿ ಎಫ್.ಐ.ಡಿ. ಮಾಡಿಕೊಳ್ಳಬೇಕು.

ನಿಮಗೆ ಸಂಬಂಧಿಸಿದ ಎಲ್ಲಾ ಸ.ನಂಗಳನ್ನು ಎಫ್.ಐ.ಡಿ. ಮಾಡಿಸದಿದ್ದಲ್ಲಿ ಸರ್ಕಾರ ವತಿಯಿಂದ ಬರುವಂತಹ ಯಾವುದೇ ಪರಿಹಾರ ಹಣವು ನಿಮ್ಮ ಖಾತೆಗೆ ಜಮಾ ಆಗುವುದಿಲ್ಲ.  ಇದಕ್ಕೆ ನೀವೇ ಹೊಣೆಯಾಗಿರುತ್ತೀರಿ. ಆದ್ದರಿಂದ ಎಲ್ಲಾ ರೈತರು ನಿಮ್ಮ ಹೆಸರಿನಲ್ಲಿ ಎಲ್ಲಾ ಸ.ನಂ.ಗಳನ್ನು ಎಫ್.ಐ.ಡಿ. ಮಾಡಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ನಿಮ್ಮ ವ್ಯಾಪ್ತಿಯ ಗ್ರಾಮ ಆಡಳಿತ ಅಧಿಕಾರಿಗಳು ಅಥವಾ ಹೋಬಳಿಯ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಲು ಕೋರಿದೆ.

ಎಫ್.ಐಡಿ ಮಾಡಿಸಿಕೊಳ್ಳಲು ಬೇಕಾದ ದಾಖಲಾತಿಗಳು

ಆಧಾರ್ ಕಾರ್ಡ್

ಬ್ಯಾಂಕ್ ಪಾಸ್ ಪುಸ್ತಕ

ಆರ್ ಟಿ. ಸಿ

ಮೊಬೈಲ್ ನಂಬರ್

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Только гении могут найти жук Необычайная головоломка: находя 3 различия за 9 секунд, можно найти Коллекция для смелых и твердых: в поисках меча гладиатора