ನವದೆಹಲಿ: ಕೇಂದ್ರದ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ರೈತರು ಹೋರಾಟ ನಡೆಸಿದ್ದು, ಈ ಹೋರಾಟವನ್ನು ಹತ್ತಿಕ್ಕಲು ಪ್ರಯತ್ನಿಸಲಾಗುತ್ತಿದೆ. ಕೆಲವು ಏಜೆನ್ಸಿಗಳು ಹೋರಾಟ ಹತ್ತಿಕ್ಕುವ ಪ್ರಯತ್ನ ನಡೆಸಿವೆ ಎಂದು ರೈತ ಮುಖಂಡ ಬಲವಂತ ಸಿಂಗ್ ಸಂಧು ಆರೋಪಿಸಿದ್ದಾರೆ.
ನಾಲ್ವರು ರೈತ ಮುಖಂಡರಿಗೆ ಗುಂಡು ಹಾರಿಸಲು ಮಾಡಿಕೊಳ್ಳಲಾಗಿದೆ ಎಂದು ಅವರು ಗಂಭೀರವಾಗಿ ಆರೋಪಿಸಿದ್ದಾರೆ.
ರೈತರೊಂದಿಗೆ ನಡೆದ 11 ನೇ ಸುತ್ತಿನ ಮಾತುಕತೆ ವಿಫಲವಾದ ನಂತರ ಕೇಂದ್ರ ಸರ್ಕಾರ ಮಾತುಕತೆ ರದ್ದು ಮಾಡುವ ಎಚ್ಚರಿಕೆ ನೀಡಿದೆ. ರೈತರು ಪಟ್ಟು ಸಡಿಲಿಸಬೇಕು. ತಮ್ಮ ನಿಲುವನ್ನು ಸಡಿಲಿಸದಿದ್ದರೆ ಮಾತುಕತೆಯಿಂದ ಹಿಂದೆ ಸರಿಯಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಕೃಷಿ ಕಾಯ್ದೆಯನ್ನು ಒಂದೂವರೆ ವರ್ಷ ಅಮಾನತಿನಲ್ಲಿ ಇಡಲಾಗುವುದು. ರೈತರು ಪ್ರತಿಭಟನೆ ವಾಪಸ್ ಪಡೆಯಬೇಕೆಂದು ಹೇಳಲಾಗಿದ್ದು, ರೈತರು ಹೋರಾಟ ಮುಂದುವರಿಸಿ ಕಾಯ್ದೆಗಳನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿದ್ದಾರೆ.