ಬೆಂಗಳೂರು: ಇಂದಿನಿಂದ 4 ದಿನಗಳ ಕಾಲ ಬೆಂಗಳೂರಿನಲ್ಲಿ ಕೃಷಿ ಮೇಳ ನಡೆಯಲಿದ್ದು, ಇದೀಗ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು.
ಇಂದಿನಿಂದ ನವೆಂಬರ್ 20ರವರೆಗೆ ಕೃಷಿ ಮೇಳ ನಡೆಯಲಿದ್ದು, ಕೃಷಿ ಮೇಳ ಆಹಾರ, ಆರೋಗ್ಯ, ಆದಾಯಕ್ಕಾಗಿ ಸಿರಿಧಾನ್ಯಗಳು ಎಂಬ ಘೋಷವಾಕ್ಯದಡಿ ನಡೆಯಲಿದೆ. ಈ ಬಾರಿ ಕೃಷಿ ಮೇಳದಲ್ಲಿ ಬಿತ್ತನೆ ಬೀಜಗಳ ಪ್ರದರ್ಶನದ ಜೊತೆಗೆ ಮಾರಾಟಕ್ಕೂ ಅವಕಾಶ ನೀಡಲಾಗಿದೆ. ಈ ಬಾರಿ ಕೃಷಿ ಮೇಳದಲ್ಲಿ ಬರ ಸ್ನೇಹಿ ಕೃಷಿ ತಂತ್ರಜ್ಞಾನಗಳು ಮತ್ತು ಸಿರಿಧಾನ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.
ಕೃಷಿ ಮೇಳ ನೋಡಲು ಬರುವ ಜನರಿಗೆ ಉಚಿತ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಈ ಬಾರಿ ಹೊರಗಿನಿಂದ ಬರುವವರಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಕೂಡ ಇದೆ. ಜಕ್ಕೂರೂ ಏರೋಡ್ರಮ್ಸ್ ನಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಕೃಷಿ ಮೇಳ 2023 ಆ್ಯಪ್ ಡೆವಲಪ್ ಮಾಡಲಾಗಿದೆ. ಯಾವ ಯಾವ ಮೇಳಗಳು ಎಲ್ಲಿದೆ ಎಂದು ಮಾಹಿತಿ ಆ್ಯಪ್ ಮೂಲಕ ದೊರೆಯಲಿದೆ.