ಬೆಂಗಳೂರು: ಅಟಲ್ ಭೂ ಜಲ ಯೋಜನೆ ಅಡಿ ನೀರಿನ ಕಡಿಮೆ ಬಳಕೆಗೆ ಅನುಕೂಲವಾಗುವಂತೆ ಸೂಕ್ಷ್ಮ ನೀರಾವರಿ ಯೋಜನೆ ಜಾರಿಗೊಳಿಸಲಾಗಿದೆ.
ಚಿಕ್ಕಬಳ್ಳಾಪುರ, ಬಾಗಲಕೋಟೆ, ಬೆಳಗಾವಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಚಿತ್ರದುರ್ಗ, ಚಾಮರಾಜನಗರ, ದಾವಣಗೆರೆ, ಗದಗ, ಹಾಸನ, ಕೋಲಾರ, ತುಮಕೂರು, ರಾಮನಗರ ಜಿಲ್ಲೆಗಳಲ್ಲಿ ಸೂಕ್ಷ್ಮ ನೀರಾವರಿ ಯೋಜನೆಯಡಿ ತುಂತುರು ಮತ್ತು ಹನಿ ನೀರಾವರಿಯ ಅನುಷ್ಠಾನಕ್ಕೆ ತೀರ್ಮಾನಿಸಿದೆ. ರೈತರು ಯೋಜನೆ ಸದ್ಬಳಕೆ ಮಾಡಿಕೊಳ್ಳಲು ತಿಳಿಸಲಾಗಿದೆ.
ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಮತ್ತು ಅಟಲ್ ಬಿಹಾರಿ ಯೋಜನೆ ಅಡಿ ತುಂತುರು ಮತ್ತು ಹನಿ ನೀರಾವರಿ ಕೃಷಿ ಘಟಕಗಳನ್ನು ಕೃಷಿ ಬೆಳೆಗಳಿಗೆ ನೀಡಲು ಆದೇಶಿಸಲಾಗಿದೆ. ಎಲ್ಲಾ ವರ್ಗದ ರೈತರಿಗೆ ಎರಡು ಹೆಕ್ಟೇರ್ ಪ್ರದೇಶದವರೆಗೆ ಸಹಾಯಧನ ನೀಡಲಾಗುವುದು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಣ್ಣ, ಅತಿ ಸಣ್ಣ ರೈತರಿಗೆ ಶೇಕಡ 90ರಷ್ಟು ಇತರೆ ವರ್ಗದ ರೈತರಿಗೆ ಶೇಕಡ 45ರಷ್ಟು ಸಹಾಯಧನ ನೀಡಲಾಗುವುದು.