ಬೆಂಗಳೂರು: ಒಂದು ವಾರದೊಳಗೆ ಕನಿಷ್ಠ 30 ಲಕ್ಷ ರೈತರಿಗೆ ಬೆಳೆ ಪರಿಹಾರದ ಮೊದಲ ಕಂತಿನ ಹಣ ಜಮಾ ಮಾಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ.
ಪರಿಹಾರದ ಹಣವನ್ನು ಶೀಘ್ರವೇ ರೈತರಿಗೆ ತಲುಪಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವರು ಹೇಳಿದ್ದಾರೆ.
ಫ್ರೂಟ್ಸ್ ತಂತ್ರಾಂಶಕ್ಕೆ ಹೊಸದಾಗಿ 7.7 ಲಕ್ಷ ರೈತರ 34 ಲಕ್ಷ ಭೂ ಹಿಡುವಳಿ ಸೇರ್ಪಡೆ ಮಾಡಲಾಗಿದೆ. ಫ್ರೂಟ್ಸ್ ನಲ್ಲಿ ಶೇಕಡ 61 ರಷ್ಟು ಇದ್ದ ರೈತರ ಮಾಹಿತಿ ಶೇಕಡ 78ಕ್ಕೆ ತಲುಪಿದೆ. ಇನ್ನೂ ಅರ್ಹ ರೈತರ ಸೇರ್ಪಡೆ ಮಾಡಲು ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.