ಚಿತ್ರದುರ್ಗ: ಸಿರಿಧಾನ್ಯ ಬೆಳೆಗಾರರಿಗೆ ನೀಡುತ್ತಿರುವ ಪ್ರೋತ್ಸಾಹಧನ ಕಡಿತಗೊಳಿಸುವ ಚಿಂತನೆ ಕೈ ಬಿಡಲಾಗಿದೆ. ಪ್ರಸ್ತುತ 10,000 ರೂ. ಪ್ರೋತ್ಸಾಹ ಧನ ನೀಡುತ್ತಿದ್ದು, ಇದನ್ನು ಮುಂದಿನ ಬಜೆಟ್ ನಲ್ಲಿ 15,000 ರೂ.ಗೆ ಹೆಚ್ಚಳ ಮಾಡಲು ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ತಿಳಿಸಿದ್ದಾರೆ.
ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿರಿಧಾನ್ಯ ಬೆಳೆಗೆ ಪ್ರೋತ್ಸಾಹ ಮುಂದುವರೆಯಲಿದ್ದು, ಯಾರಿಗೂ ಅನುಮಾನ ಬೇಡ, ಪ್ರೋತ್ಸಾಹ ಧನವನ್ನು ಈಗಿರುವ 10 ಸಾವಿರದಿಂದ 15,000 ರೂ.ಗೆ ಬಜೆಟ್ ನಲ್ಲಿ ಹೆಚ್ಚಳ ಮಾಡುವ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ.