ಕಲಬುರಗಿ: ಪ್ರಸಕ್ತ ಸಾಲಿಗೆ “ಮುಖ್ಯಮಂತ್ರಿ ರೈತ ವಿದ್ಯಾ ನಿಧಿ” ಶಿಷ್ಯ ವೇತನಕ್ಕಾಗಿ ಕಲಬುರಗಿ ಹಾಗೂ ಕಮಲಾಪುರ ತಾಲೂಕುಗಳ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ರೈತರ ಮಕ್ಕಳಿಗೆ ಹೆಚ್ಚಿನ ವ್ಯಾಸಂಗಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಶಿಷ್ಯವೇತನ ಯೋಜನೆಯನ್ನು ಜಾರಿಗೆ ತರಲಾಗಿದೆ. 10 ನೇ ತರಗತಿ ಮುಗಿದ ನಂತರ ಯಾವುದೇ ಅಧಿಕೃತವಾಗಿ ನೋಂದಣೆಯಾಗಿರುವ ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಕೋರ್ಸಗಳವರೆಗೆ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಅರ್ಹ ವಿದ್ಯಾರ್ಥಿಗಳು ಕೃಷಿಕ ಪ್ರಮಾಣ ಪತ್ರ (ಎಫ್‍ಐಡಿ), ಪಹಣಿ ಪತ್ರ, ಕಾಲೇಜಿನ ದೃಢೀಕರಣ, ಬ್ಯಾಂಕ್ ಪಾಸ್‍ಬುಕ್, ಪಾಲಕರ ತಂದೆ ಹಾಗೂ ತಾಯಿಯ ಆಧಾರ್ ಕಾರ್ಡ್, ಅಂಕಪಟ್ಟಿ ಹಾಗೂ ಭಾವಚಿತ್ರದೊಂದಿಗೆ https://ssp.postmatric.karnataka.gov.in/2122ca ವೆಬ್‍ಸೈಟ್‍ದಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. .ಎಫ್.ಐ.ಡಿ. ಪ್ರಮಾಣ ಪತ್ರ ಇಲ್ಲದ ವಿದ್ಯಾರ್ಥಿಗಳು ಕೃಷಿ ಇಲಾಖೆಗೆ ಸಂಪರ್ಕಿಸಿ ಪಹಣಿ, ಬ್ಯಾಂಕ್ ಪಾಸ್ ಬುಕ್‍ಝರಾಕ್ಸ್ ಮತ್ತು ಭಾವಚಿತ್ರ ನೀಡಿ ಪಡೆಯಬಹುದಾಗಿದೆ.
ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಹಾಗೂ ಕಮಲಾಪುರ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.