
ಬೆಂಗಳೂರು: ಯಾರದೋ ಪಹಣಿ ಹೆಸರಲ್ಲಿ ನಕಲಿ ಎಫ್ಐಡಿ ಸೃಷ್ಟಿಸಿ ವಂಚನೆ ಹಿನ್ನೆಲೆಯಲ್ಲಿ ಹೊಸ ನಿಯಮ ಜಾರಿಗೆ ಸರ್ಕಾರ ತಯಾರಿ ನಡೆಸಿದ್ದು, ಬೆಂಬಲ ಬೆಲೆ ಪ್ರಯೋಜನ ಪಡೆಯಲು ಇನ್ನು ಮುಂದೆ ಬಯೋಮೆಟ್ರಿಕ್ ಕಡ್ಡಾಯಗೊಳಿಸಲು ಮುಂದಾಗಿದೆ.
ಕನಿಷ್ಠ ಬೆಂಬಲ ಬೆಲೆ ಯೋಜನೆಯ ಸೌಲಭ್ಯ ಪಡೆಯಲು ಯಾರದೋ ಎಫ್ಐಡಿ ಸೃಷ್ಟಿಸಿ ವಂಚನೆ ನಡೆಸುತ್ತಿದ್ದು, ಇದನ್ನು ತಡೆಯಲು ಸರ್ಕಾರ ಮುಂದಾಗಿದೆ. ಖರೀದಿ ಕೇಂದ್ರಗಳಲ್ಲಿ ನೋಂದಣಿ ಮಾಡಿಸುವಾಗ ಬಯೋಮೆಟ್ರಿಕ್ ಕಡ್ಡಾಯಗೊಳಿಸಲು ಕ್ರಮ ಕೈಗೊಂಡಿದೆ.
ಮುಕ್ತ ಮಾರುಕಟ್ಟೆಯಲ್ಲಿ ಕೆಲವು ಆಹಾರ ಧಾನ್ಯಗಳ ಬೆಲೆ ಬೆಂಬಲ ಬೆಲೆ ಯೋಜನೆ ದರಕ್ಕಿಂತ ಕಡಿಮೆ ಇದ್ದು, ಕೆಲವು ವ್ಯಾಪಾರಸ್ಥರು, ದೊಡ್ಡ ರೈತರು ನಕಲಿ ಫ್ರೂಟ್ಸ್ ಐಡಿ ಸೃಷ್ಟಿಸಿ ಅಮಾಯಕ ರೈತರ ಪಹಣಿ ಬಳಸಿಕೊಂಡು ಕನಿಷ್ಠ ಬೆಂಬಲ ಬೆಲೆ ಯೋಜನೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದನ್ನು ತಡೆಯುವ ಉದ್ದೇಶದಿಂದ ಸರ್ಕಾರ ಬಯೋಮೆಟ್ರಿಕ್ ನೋಂದಣಿ ವ್ಯವಸ್ಥೆ ಜಾರಿಗೆ ಮುಂದಾಗಿದೆ ಎಂದು ಹೇಳಲಾಗಿದೆ.