ನವದೆಹಲಿ/ಬೆಂಗಳೂರು: ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೇಶಾದ್ಯಂತ ಇಂದು ರೈತ ಸಂಘಟನೆಗಳು ಭಾರತ ಬಂದ್ ಗೆ ಕರೆ ನೀಡಿವೆ.
ಕಾಂಗ್ರೆಸ್, ಜೆಡಿಎಸ್, ಟಿಆರ್ಎಸ್, ಟಿಎಂಸಿ, ಡಿಎಂಕೆ, ಎನ್ಸಿಪಿ, ಶಿವಸೇನೆ, ಆಮ್ ಆದ್ಮಿ ಪಾರ್ಟಿ ಸೇರಿದಂತೆ ಹಲವು ರಾಜಕೀಯ ಪಕ್ಷಗಳು ಬೆಂಬಲ ನೀಡಿವೆ. ಅನೇಕ ಸಂಘಟನೆಗಳು ಕೂಡ ಬೆಂಬಲ ನೀಡಿದ್ದು, ಕರ್ನಾಟಕದಲ್ಲಿಯೂ ಬಂದ್ ಗೆ ಭಾರೀ ಬೆಂಬಲ ವ್ಯಕ್ತವಾಗಿದೆ.
ಅಗತ್ಯ ವಸ್ತು ಮತ್ತು ಸೇವೆಗಳನ್ನು ಹೊರತುಪಡಿಸಿ ಉಳಿದ ಚಟುವಟಿಕೆಗಳು ಬಂದ್ ಆಗುವ ಸಾಧ್ಯತೆ ಇದೆ. ಮೆಟ್ರೋ, ಬಿಎಂಟಿಸಿ, ಕೆಎಸ್ಆರ್ಟಿಸಿ ಸಂಚಾರ ಇರುತ್ತೆ, ಆಸ್ಪತ್ರೆ, ಮೆಡಿಕಲ್ ಶಾಪ್, ಸರ್ಕಾರಿ ಕಚೇರಿ, ಹಾಲು, ಪೇಪರ್, ವಿಮಾನ, ರೈಲು ಸೇವೆ, ಬ್ಯಾಂಕ್ ಸೇವೆ, ಹೋಟೆಲ್, ಅಂಗಡಿ ಇರುತ್ತವೆ.
ಸರಕು ಸಾಗಾಣಿಕೆ ವಾಹನ, ಲಾರಿ, ಟ್ಯಾಕ್ಸಿ, ಓಲಾ, ಉಬರ್, ಆಟೋ ಸೇವೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ. ಬೀದಿಬದಿ ವ್ಯಾಪಾರಿಗಳು ಕೂಡ ಬಂದ್ ಬೆಂಬಲಿಸಿದ್ದಾರೆ.