ಬೆಂಗಳೂರು : ರೈತರ ಬಗ್ಗೆ ಸಚಿವ ಶಿವಾನಂದ ಪಾಟೀಲ್ ಹಗುರವಾಗಿ ಮಾತನಾಡಿ ಹೊಸ ವಿವಾದ ಸೃಷ್ಟಿಸಿದ್ದಾರೆ. ಸಚಿವರ ಈ ಹೇಳಿಕೆ ವ್ಯಾಪಕ ಟೀಕೆಗೆ ಕಾರಣವಾಗಿದೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸುಟ್ಟಟ್ಟಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು ‘ ರೈತರು ಬರಗಾಲ ಬರಲಿ ಅಂತ ಕಾಯ್ತಾ ಇದ್ದಾರೆ, ಬರ ಪರಿಹಾರ ಸಿಗುತ್ತೆ ಎಂದು ರೈತರು ನಿರೀಕ್ಷೆ ಇಟ್ಟುಕೊಳ್ಳುತ್ತಾರೆ. ಬರಗಾಲದ ಪರಿಹಾರಕ್ಕಾಗಿ ರೈತರು ಯಾವಾಗಲೂ ಪದೇ ಪದೇ ನಿರೀಕ್ಷೆ ಇಟ್ಟುಕೊಳ್ಳಬಾರದು ಎಂದು ಹೇಳಿದ್ದಾರೆ.
ಬರಗಾಲ ಬರಲೆಂದು ರೈತರಿಗೆ ಆಸೆ ಇರುತ್ತೆ. ಬರಗಾಲ ಬಂದ್ರೆ ರೈತರು ಸಾಲ ಮನ್ನಾದ ನಿರೀಕ್ಷೆ ಇಟ್ಟುಕೊಳ್ಳುತ್ತಾರೆ. ಹಿಂದಿನ ಸರ್ಕಾರಗಳು ಸಾಲ ಮನ್ನಾ ಮಾಡಿವೆ. ಆದ್ರೆ ಸರ್ಕಾರ ಸಂಕಷ್ಟದಲ್ಲಿದ್ದಾಗ ಅದು ಕಷ್ಟ ಸಾಧ್ಯ. ಈ ಎಲ್ಲಾ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ರೈತರು ಬೆಳೆ ಬೆಳೆಯಬೇಕು ಎಂದು ಹೇಳಿದ್ದಾರೆ.
ಸಚಿವ ಶಿವಾನಂದ್ ಪಾಟೀಲ್ ಗೆ ಅಧಿಕಾರದ ಮದ ಏರಿದೆ ಎಂದು ಮಾಜಿ ಶಾಸಕ ಸಿಟಿ ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೀವೇ ಮದ ಇಳಿಸಿದ್ರೆ ನಿಮ್ಮ ಪಕ್ಷಕ್ಕೆ ಒಳ್ಳೆಯದು, ಇಲ್ಲದೇ ಹೋದರೆ ರಾಜ್ಯದ ಜನ ನಿಮ್ಮ ಮದ ಇಳಿಸುತ್ತಾರೆ. ಶಿವಾನಂದ ಪಾಟೀಲ್ ಅವರನ್ನು ಕೂಡಲೇ ಸಂಪುಟದಿಂದ ವಜಾ ಮಾಡಬೇಕು ಎಂದು ಸಿಟಿ ರವಿ ಕಿಡಿಕಾರಿದ್ದಾರೆ.