alex Certify ರೈತರ ಮಕ್ಕಳಿಗೆ ಗುಡ್ ನ್ಯೂಸ್: ಖಾತೆಗೆ ಹಣ ಜಮಾ, ಮುಖ್ಯಮಂತ್ರಿ ರೈತ ವಿದ್ಯಾನಿಧಿ ಸೌಲಭ್ಯಕ್ಕೆ ಅರ್ಜಿ ಆಹ್ವಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈತರ ಮಕ್ಕಳಿಗೆ ಗುಡ್ ನ್ಯೂಸ್: ಖಾತೆಗೆ ಹಣ ಜಮಾ, ಮುಖ್ಯಮಂತ್ರಿ ರೈತ ವಿದ್ಯಾನಿಧಿ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ಶಿವಮೊಗ್ಗ: ರೈತರ ಮಕ್ಕಳ ಹೆಚ್ಚಿನ ಹಾಗೂ ಉನ್ನತ ಶಿಕ್ಷಣ ಪ್ರೋತ್ಸಾಹಿಸಲು ಹೊಸ ಶಿಷ್ಯವೇತನ ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದ್ದು, 2021-22 ನೇ ಸಾಲಿಗೆ ವಿದ್ಯಾರ್ಥಿಗಳು ಈ ಸೌಲಭ್ಯ ಪಡೆಯಲು ಕೃಷಿ ಇಲಾಖೆಗೆ ಅರ್ಜಿ ಸಲ್ಲಿಸಬಹುದು.

ರಾಜ್ಯದಲ್ಲಿ ಅಧಿಕೃತವಾಗಿ ನೋಂದಣಿಯಾಗಿರುವ ಶಿಕ್ಷಣ ಸಂಸ್ಥೆಗಳು/ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಕೋರ್ಸ್‍ಗಳವರೆಗೆ ಪ್ರವೇಶವನ್ನು ಪಡೆದಿರುವ ರಾಜ್ಯದ ರೈತರ ಎಲ್ಲಾ ಮಕ್ಕಳ ಬ್ಯಾಂಕ್‍ ಗಳ ಖಾತೆಗಳಿಗೆ ನೇರ ನಗದು ವರ್ಗಾವಣೆ(ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್‍ಫರ್-ಡಿಬಿಟಿ) ಪದ್ಧತಿಯ ಮೂಲಕ 2000 ರೂ.ನಿಂದ 11000 ರೂ. ವರೆಗೆ 2021-22ನೇ ಆರ್ಥಿಕ ವರ್ಷದ ಸಾಲಿನಿಂದ ಜಾರಿಗೆ ಬರುವಂತೆ ಶಿಷ್ಯವೇತನದ ಹಣದ ಮೊತ್ತವನ್ನು ವಾರ್ಷಿಕ ಶಿಷ್ಯವೇತನದ ರೂಪದಲ್ಲಿ ಒದಗಿಸಲು ಮತ್ತು ಪಾವತಿಸಲು ಸರ್ಕಾರದಿಂದ ಅನುಮೋದನೆ ನೀಡಲಾಗಿರುತ್ತದೆ.

ದಿನಾಂಕ:10.12.2021 ಮತ್ತು 31-12-2021 ರ ಸರ್ಕಾರದ ಮಾರ್ಪಾಡು ಆದೇಶದನ್ವಯ ರೈತ ಕುಟುಂಬದ ಎಲ್ಲಾ ಮಕ್ಕಳು ಇತರೆ ಯಾವುದೇ ವಿದ್ಯಾರ್ಥಿವೇತನ ಪಡೆಯುತ್ತಿದ್ದರೂ, ‘ಮುಖ್ಯಮಂತ್ರಿ ರೈತ ವಿದ್ಯಾನಿಧಿ’ ಪಡೆಯಲು ಅರ್ಹರಾಗಿತ್ತಾರೆ. ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆಯಡಿ ಪ್ರೌಢಶಿಕ್ಷಣ(8 ರಿಂದ 10 ನೇ ತರಗತಿ ವರೆಗೆ) ವ್ಯಾಸಂಗ ಮಾಡುತ್ತಿರುವ ರೈತ ಕುಟುಂಬದ ಹೆಣ್ಣು ಮಕ್ಕಳಿಗೆ 2021-22 ನೇ ಆರ್ಥಿಕ ವರ್ಷದಿಂದ ವಾರ್ಷಿಕವಾಗಿ 2000 ರೂ. ವಿಧ್ಯಾರ್ಥಿ ವೇತನ ಸೌಲಭ್ಯ ವಿsಸ್ತರಣೆ ಮಾಡಲಾಗಿದೆ.

2021-22 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಪ್ರೌಡ ಶಿಕ್ಷಣ ಮತ್ತು ಪದವಿ ಪೂರ್ವ ಶಿಕ್ಷಣ ಕೋರ್ಸ್‍ಗೆ ಪ್ರವೇಶ ಪಡೆದ ವಿದ್ಯಾರ್ಥಿಗಳ ಸ್ಯಾಟ್ಸ್ ಐಡಿ ಮತ್ತು ಎಫ್‍ಐಡಿ((Sats ID & FID) ಅನ್ವಯ ಅರ್ಹರನ್ನು ಗುರುತಿಸಿ ಪಾವತಿಸಲಾಗುತ್ತಿದೆ. ಆದರೆ ಇತರೆ ಎಲ್ಲಾ ಕೋರ್ಸ್‍ಗಳ ರೈತರ ಮಕ್ಕಳು ಜಾಲತಾಣ https://ssp.postmatric.karnataka.gov.in ದಲ್ಲಿ ಅರ್ಜಿ ಸಲ್ಲಿಸಿ ಯೋಜನೆಯ ಪ್ರಯೋಜನ ಪಡೆದುಕೊಳ್ಳಬೇಕಾಗಿ ಕೋರಿದೆ.

ವಿದ್ಯಾರ್ಥಿಯು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಮತ್ತು ಎನ್‍ಪಿಸಿಐ ಮ್ಯಾಪಿಂಗ್ ಮಾಡಿಸಿರಬೇಕು. ಹಾಗೂ ತಂದೆ ಅಥವಾ ತಾಯಿಯ ರೈತರ ಗುರುತಿನ ಸಂಖ್ಯೆ(ಎಫ್‍ಐಡಿ) ಹೊಂದಿರಬೇಕು. ಎಫ್‍ಐಡಿ ನೊಂದಣಿ ಮಾಡಲು ಹತ್ತಿರದ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಲು ಕೋರಿದೆ.

ವಿದ್ಯಾರ್ಥಿ ವೇತನ ವಿವರ :- ಪ್ರೌಢಶಿಕ್ಷಣ(8 ರಿಂದ 10 ನೇ ತರಗತಿ) ವಿದ್ಯಾರ್ಥಿನಿಯರಿಗೆ ಮಾತ್ರ 2000 ರೂ.. ಪಿಯುಸಿ/ಐಟಿಐ/ಡಿಪ್ಲೊಮಾ ವಿದ್ಯಾರ್ಥಿಗಳಿಗೆ 2500 ರೂ. ಮತ್ತು ವಿದ್ಯಾರ್ಥಿನಿಯರಿಗೆ 3000 ರೂ. ಎಲ್ಲಾ ಪದವಿ ಬಿ.ಎ/ಬಿ.ಎಸ್‍ಸಿ/ಬಿ.ಕಾಂ ಇತ್ಯಾದಿ(ವೃತ್ತಿಪರ ಕೋರ್ಸ್‍ಗಳನ್ನು ಹೊರತುಪಡಿಸಿ) ವಿದ್ಯಾರ್ಥಿಗಳಿಗೆ 5000 ರೂ. ವಿದ್ಯಾರ್ಥಿನಿಯರಿಗೆ 5500 ರೂ. ಎಲ್‍ಎಲ್‍ಬಿ, ಪ್ಯಾರಾಮೆಡಿಕಲ್/ಬಿ.ಫಾರ್ಮ್/ನರ್ಸಿಂಗ್ ಇತ್ಯಾದಿ ವೃತ್ತಿಪರ ಕೋರ್ಸ್‍ಗಳ ವಿದ್ಯಾರ್ಥಿಗಳಿಗೆ 7500 ರೂ., ವಿದ್ಯಾರ್ಥಿನಿಯರಿಗೆ 8000 ರೂ., ಎಂಬಿಬಿಎಸ್/ಬಿ.ಇ/ಬಿ.ಟೆಕ್ ಮತ್ತು ಎಲ್ಲಾ ಸ್ನಾತಕೋತ್ತರ ಕೋರ್ಸ್‍ಗಳ ವಿದ್ಯಾರ್ಥಿಗಳಿಗೆ 10000 ರೂ., ವಿದ್ಯಾರ್ಥಿನಿಯರಿಗೆ 11000 ರೂ. ಶಿಷ್ಯವೇತನ ನೀಡಲಾಗುವುದು. ಪುನರಾವರ್ತಿತ ವಿದ್ಯಾರ್ಥಿಗಳು(ರಿಪಿಟರ್ಸ್) ಈ ಸೌಲಭ್ಯ ಪಡೆಯಲು ಅರ್ಹರಿರುವುದಿಲ್ಲ ಎಂದು ಜಂಟಿ ಕೃಷಿ ನಿರ್ದೇಶಕ ಡಾ.ಕಿರಣ್‍ಕುಮಾರ್ ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...