ನವದೆಹಲಿ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 14ನೇ ಕಂತು ಇಂದು ರೈತರ ಖಾತೆಗೆ ಜಮಾ ಆಗಲಿದೆ.
17,000 ಕೋಟಿ ರೂ.ಗಳನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಬಿಡುಗಡೆ ಮಾಡಲಿದ್ದಾರೆ. 8.5 ಕೋಟಿ ರೈತರಿಗೆ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ತಲಾ ಎರಡು ಸಾವಿರ ರೂಪಾಯಿಗಳನ್ನು ಅವರ ಖಾತೆಗೆ ನೇರವಾಗಿ ಜಮಾ ಮಾಡಲಾಗುವುದು.
ಈ ಕಂತು ಪೂರ್ಣ ಬಿಡುಗಡೆ ಯಾಗುವುದರೊಂದಿಗೆ ಒಟ್ಟು 2.59 ಲಕ್ಷ ಕೋಟಿ ರೂ. ರೈತರಿಗೆ ತಲುಪಿದಂತಾಗುತ್ತದೆ. ರೈತರಿಗೆ ಎರಡು ಸಾವಿರ ರೂ.ನಂತೆ ವಾರ್ಷಿಕ 6 ಸಾವಿರ ರೂ. ಅವರ ಖಾತೆಗೆ ಜಮಾ ಮಾಡಲಾಗುವುದು.
ತಮ್ಮ ಖಾತೆಗೆ ಹಣ ಜಮಾ ಆಗಿದೆಯೇ ಎಂಬುದನ್ನು ತಿಳಿದುಕೊಳ್ಳಲು ರೈತರು pmkisan.gov.in ವೆಬ್ಸೈಟ್ ನಲ್ಲಿ ಪರಿಶೀಲಿಸಬಹುದು ಅಥವಾ ತಮ್ಮ ಬ್ಯಾಂಕ್ ಖಾತೆಯನ್ನು ಪರಿಶೀಲಿಸಿದಲ್ಲಿ ಹಣ ಜಮಾ ಆದ ಮಾಹಿತಿ ತಿಳಿಯಬಹುದಾಗಿದೆ.