ಧಾರವಾಡ: ಜಿಲ್ಲೆಯ ರೈತರುಗಳಿಗೆ ಬೆಂಬಲ ಬೆಲೆ ಹಾಗೂ ಕೃಷಿ ಮತ್ತು ಕೃಷಿ ಸಂಬಂಧಿತ ವಿವಿಧ ಯೋಜನೆಗೆ ಸಹಕಾರಿಯಾಗಲು ಅನುವಾಗುವಂತೆ ಆಧಾರ್ ಪಹಣಿ ಜೋಡಣೆ ಆಂದೋಲನ ಹಮ್ಮಿಕೊಂಡಿದ್ದು, ಜಿಲ್ಲೆಯ ರೈತರ ಜಮೀನು ಗುರುತು (ಎಫ್.ಐ.ಡಿ) ಸಂಖ್ಯೆ ಪಡೆದುಕೊಳ್ಳಬೇಕಾಗಿದೆ.
ಜಿಲ್ಲೆಯಲ್ಲಿ ಒಟ್ಟಾರೆ 4,47,488 (ಸರ್ವೆ ನಂಬರ್) ಜಮೀನುಗಳಿದ್ದು, ಈಗಾಗಲೇ 1,84,826 ಜಮೀನುಗಳಿಗೆ ಆಧಾರ್ ಜೋಡಣೆಯಾಗಿದ್ದು, ಇನ್ನೂ ಬಾಕಿ ಉಳಿದಿರುವ 2,62,662 ಜಮೀನುಗಳಿಗೆ ಆಧಾರ್ ಜೋಡಣೆ ಬಾಕಿ ಇರುತ್ತದೆ.
ಎಫ್.ಐ.ಡಿ.(ಫಾರ್ಮರ್ಸ್ ಐಡೆಂಟಿಫಿಕೇಷನ್ ನಂಬರ್) ನೋಂದಣಿ ಮಾಡದೇ ಇರುವ ರೈತರು ಅಗತ್ಯ ದಾಖಲಾತಿಗಳಾದ ಪಹಣಿ ಪತ್ರಿಕೆ, ಆಧಾರ್ ಕಾರ್ಡ್ ಪ್ರತಿಯೊಂದಿಗೆ ಒಪ್ಪಿಗೆ ಪತ್ರ, ಬ್ಯಾಂಕ್ ಖಾತೆಯ ವಿವರದ ಪ್ರತಿ, ಎಸ್.ಸಿ ಮತ್ತು ಎಸ್.ಟಿ ರೈತರು ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಪ್ರತಿ, ಅರ್ಜಿದಾರರ ಭಾವಚಿತ್ರದೊಂದಿಗೆ ತಮ್ಮ ಸಮೀಪದ ಗ್ರಾಮ ಲೆಕ್ಕಾಧಿಕಾರಿ, ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಛೇರಿ ಅಥವಾ ಸಹಾಯಕ ನಿರ್ದೇಶಕರು ತೋಟಗಾರಿಕೆ ಇಲಾಖೆ, ರೇಷ್ಮೆ ಇಲಾಖೆ ಮತ್ತು ಪಶು ಸಂಗೋಪನೆ ಇಲಾಖೆ ಇವುಗಳಲ್ಲಿ ಯಾವುದಾದರೂ ಕಛೇರಿಗೆ ದಾಖಲೆಗಳನ್ನು ಸಲ್ಲಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.