ಚಿಕ್ಕಮಗಳೂರು: ಒತ್ತುವರಿ ತೆರವು ಆತಂಕ ಹಾಗೂ ಸಾಲ ಬಾಧೆಯಿಂದ ಆತಂಕಕ್ಕೆ ಒಳಗಾದ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೊಪ್ಪ ತಾಲೂಕಿನ ಮೇಗೂರಿನ ಕರುಣಾಕರ ಆತ್ಮಹತ್ಯೆ ಮಾಡಿಕೊಂಡ ರೈತ. ಅವರು ಸ್ವಲ್ಪ ಪ್ರಮಾಣದ ಒತ್ತುವರಿ ಮಾಡಿಕೊಂಡಿದ್ದು, ಸ್ಥಳೀಯ ಸೊಸೈಟಿ, ಬ್ಯಾಂಕಿನಲ್ಲಿ ಸಾಲ ಪಡೆದುಕೊಂಡಿದ್ದರು. ಒಂದಿಷ್ಟು ಕೈ ಸಾಲ ಕೂಡ ಮಾಡಿಕೊಂಡಿದ್ದರು ಎನ್ನಲಾಗಿದೆ.
ಜಮೀನಿನಿಂದ ಬರುತ್ತಿದ್ದ ಅಲ್ಪಸ್ವಲ್ಪ ಆದಾಯವೇ ಅವರಿಗೆ ಜೀವನಾಧಾರವಾಗಿತ್ತು. ಒಂದು ತಿಂಗಳಿನಿಂದ ಕ್ಷೇತ್ರದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಸುದ್ದಿ ಕೇಳಿ ಚಿಂತೆಗೆ ಒಳಗಾಗಿದ್ದ ಅವರು ತಮ್ಮ ಜಮೀನನ್ನು ಒತ್ತುವರಿ ತೆರವು ಮಾಡಿದರೆ ಮಗಳ ಮದುವೆಯಾಗಲ್ಲ, ಸಾಲ ತೀರಿಸಲು ಬೇರೆ ದಾರಿ ಇಲ್ಲ ಎಂದು ನೊಂದುಕೊಂಡಿದ್ದರು. ಚಿಂತೆಗೆ ಒಳಗಾಗಿದ್ದ ಅವರು ಕುಟುಂಬದವರು ಸ್ಥಳೀಯರ ಜೊತೆ ನೋವು ತೋಡಿಕೊಂಡಿದ್ದರು. ತುಂಬಾ ಚಿಂತೆಗೆ ಒಳಗಾಗಿ ಮನೆಯ ಸಮೀಪ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.