
ದಾವಣಗೆರೆ: ಸಾಲಗಾರರ ಕಾಟಕ್ಕೆ ಮನನೊಂದ ರೈತ ಆತ್ಮಹತ್ಯೆಗೆ ಶರಣಾಗಿರುವ ದಾರುನ ಘಟನೆ ದಾವಣಗೆರೆ ಜಿಲ್ಲೆಯ ಶಿವಪುರ ಗ್ರಾಮದಲ್ಲಿ ನಡೆದಿದೆ.
38 ವರ್ಷದ ಭೀಮಾನಾಯ್ಕ್ ಆತ್ಮಹತ್ಯೆ ಮಾಡಿಕೊಂಡವರು. ಮೆಕ್ಕೆಜೋಳ ಬೆಳೆ ಕೈಕೊಟ್ಟಿದ್ದರಿಂದ ತೀವ್ರವಾಗಿ ಮನನೊಂದಿದ್ದ ಭೀಮಾನಾಯ್ಕ್ ಬ್ಯಾಂಕ್ ಸೇರಿದಂತೆ 12 ಲಕ್ಷಕ್ಕೂ ಹೆಚ್ಚು ಸಾಲ ಮಾಡಿಕೊಂಡಿದ್ದರು.
ಇದೇ ವೇಳೆ ಸಾಲಗಾರರು ಮನೆ ಬಳಿ ಬಂದು ಗಲಾಟೆ ಮಾಡಿದ್ದರು. ಇದರಿಂದ ಬೇಸತ್ತ ರೈತ ಭೀಮಾನಾಯ್ಕ್ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.