ಶಿವಮೊಗ್ಗ: ಮೈಮೇಲೆ ಡೀಸೆಲ್ ಸುರಿದುಕೊಂಡು ರೈತರೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆಯ ಟ್ರ್ಯಾಕ್ಟರ್ ಶೋ ರೂಂ ಬಳಿ ನಡೆದಿದೆ.
ಲಕ್ಷ್ಮೀನಾರಾಯಣ ಆತ್ಮಹತ್ಯೆಗೆ ಯತ್ನಿಸಿರುವ ರೈತ. ಹೊಸನಗರ ತಾಲೂಕಿನ ಮಂದ್ರೊಳ್ಳಿ ನಿವಾಸಿ. ತಕ್ಷಣ ಸ್ಥಳೀಯರು ರೈತನನ್ನು ತಡೆದು, ರಕ್ಷಿಸಿದ್ದಾರೆ. 4 ವರ್ಷಗಳ ಹಿಂದೆ ರೈತ ಟ್ರ್ಯಾಕ್ತರ್ ಖರೀದಿಸಿದ್ದರು. ಶೋ ರೂಂ ನವರು 5 ವರ್ಷ ಗ್ಯಾರಂಟಿ ಎಂದು ಹೇಳಿದ್ದರು. ಆದರೆ ಟ್ರ್ಯಾಕ್ಟರ್ ಖರೀದಿ ಮಾಡಿದ ದಿನದಿಂದಲೂ ಒಂದಿಲ್ಲ ಒಂದು ಸಮಸ್ಯೆ ಕಾಣಿಸಿಕೊಲ್ಳುತ್ತಲೇ ಇತ್ತು. ಟ್ರ್ಯಾಕ್ತರ್ ಪದೇ ಪದೇ ರಿಪೇರಿಗೆ ಬರುತ್ತಿರುವುದರಿಂದ ಮನನೊಂದರೈತ ಲಕ್ಷ್ಮೀನಾರಾಯಣ ಬೇಸತ್ತುಹೋಗಿದ್ದರು.
ಈ ಬಗ್ಗೆ ಶೋ ರೂಂ ನಲ್ಲಿ ಕೇಳಿದ್ದಕ್ಕೆ ರೈತನಿಗೆ ಅವಹೇಳನಕಾರಿಯಾಗಿ ಮಾತನಾಡಿ ಕಳುಹಿಸಿದ್ದರು. ಟ್ರ್ಯಾಕ್ಟರ್ ಶೋ ರೂಂ ನವರು ಸಮಸ್ಯೆಗೆ ಸ್ಪಂದಿಸದಿರುವುದರಿಂದ ಇನ್ನಷ್ಟು ಇನ್ನಷ್ಟು ನೊಂದ ರೈತ ಶೋ ರೂಂ ಮುಂದೆಯೇ ಮೈಮೇಲೆ ಡೀಸೆಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸದ್ಯ ರೈತನನ್ನು ತಕ್ಷಣ ತಡೆದ ಸ್ಥಳೀಯರು ಅವರನ್ನು ರಕ್ಷಿಸಿದ್ದಾರೆ.