ಬೆಂಗಳೂರು: 95,830 ಅನರ್ಹ ರೈತರಿಗೆ ಪಿಎಂ ಕಿಸಾನ್ ಯೋಜನೆಯಡಿ ಖಾತೆಗೆ ಹಣ ಜಮಾ ಮಾಡಲಾಗಿದೆ. ಆದಾಯ ತೆರಿಗೆದಾರರಾಗಿರುವ ಈ ರೈತರು ಯೋಜನೆಯ ದುರ್ಬಳಕೆ ಮಾಡಿಕೊಂಡು ಹಣ ಪಡೆದಿದ್ದಾರೆ. ಇಂತಹ ಅಕ್ರಮ ಫಲಾನುಭವಿಗಳಿಂದ ಹಣ ವಸೂಲಿಗೆ ಕೃಷಿ ಇಲಾಖೆ ಕ್ರಮ ಕೈಗೊಂಡಿದೆ.
ಕೃಷಿ ಜಮೀನು ಹೊಂದಿದ ರೈತರು ಯೋಜನೆಯ ಫಲಾನುಭವಿಗಳಾಗಿದ್ದಾರೆ. ಆದಾಯ ತೆರಿಗೆ ಪಾವತಿಸುವವರು ಯೋಜನೆಯ ಹಣ ಪಡೆಯಲು ಅನರ್ಹರು ಎಂದು ಹೇಳಿದ್ದರೂ, ಇದನ್ನು ಮುಚ್ಚಿಟ್ಟು ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ನಿಯಮಬಾಹಿರವಾಗಿ ಅನರ್ಹ ರೈತರು ಹಣವು ಪಡೆದುಕೊಂಡಿದ್ದಾರೆ.
ಇಂತಹ ಅನರ್ಹ ರೈತರನ್ನು ಪತ್ತೆ ಮಾಡಿರುವ ಕೃಷಿ ಇಲಾಖೆ ಬ್ಯಾಂಕ್ ಗಳಿಗೆ ಸೂಚನೆ ನೀಡಿದೆ. ಅನರ್ಹ ರೈತರಿಂದ ಹಣ ವಾಪಸ್ ಪಡೆಯಲು ಕ್ರಮ ಕೈಗೊಂಡಿದೆ.