
ಉಡುಪಿ: ಹಾವು ಕಚ್ಚಿದ ಪರಿಣಾಮ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಕೃಷಿಕ ಮೃತಪಟ್ಟ ಘಟನೆ ನವೆಂಬರ್ 20ರಂದು ಸಂಜೆ ನಡೆದಿದೆ.
ಹೆಜಮಾಡಿ ಗ್ರಾಮದ ಜಯಕರ(66) ಮೃತಪಟ್ಟ ಕೃಷಿಕ ಎಂದು ಗುರುತಿಸಲಾಗಿದೆ. ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಅವರಿಗೆ ವಿಷ ಜಂತು ಕಚ್ಚಿದೆ. ತೀವ್ರ ಅಸ್ವಸ್ಥರಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.