alex Certify ಜಮೀನಿನಲ್ಲಿ ಬೆಳೆ ಹಾನಿ ಮಾಡಿದ ಕಾಡುಕೋಣಗಳ ಹಿಂಡು ಕಂಡು ಆಘಾತದಿಂದ ರೈತ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಮೀನಿನಲ್ಲಿ ಬೆಳೆ ಹಾನಿ ಮಾಡಿದ ಕಾಡುಕೋಣಗಳ ಹಿಂಡು ಕಂಡು ಆಘಾತದಿಂದ ರೈತ ಸಾವು

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ರಿಪ್ಪನ್ ಪೇಟೆ ಸಮೀಪದ ಗೇರ್ಗಲ್ ಗ್ರಾಮದ ಬಳಿ ಕಾಡುಕೋಣಗಳ ಹಿಂಡು ಜಮೀನಿನಲ್ಲಿ ಬೆಳೆ ಹಾಳು ಮಾಡುವುದನ್ನು ಕಂಡ ರೈತರೊಬ್ಬರು ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟ ಘಟನೆ ಬುಧವಾರ ಸಂಜೆ ನಡೆದಿದೆ.

ಪ್ರಗತಿಪರ ಕೃಷಿಕ ನಾಗಭೂಷಣರಾವ್(56) ಮೃತಪಟ್ಟವರು. ಅವರ ಜಮೀನಿಗೆ ಕಾಡುಕೋಣಗಳ ಹಿಂಡು ದಾಳಿ ಮಾಡಿರುವ ಮಾಹಿತಿ ತಿಳಿದು ಸ್ಥಳಕ್ಕೆ ತೆರಳಿದ್ದಾರೆ. ಕಾಡುಕೋಣಗಳ ಹಿಂಡು ಫಸಲು ಹಾಳು ಮಾಡುವುದನ್ನು ಕಂಡು ಆಘಾತಕ್ಕೊಳಗಾದ ಅವರು ಕುಸಿದು ಬಿದ್ದಿದ್ದಾರೆ.

ಬಹಳ ಸಮಯದವರೆಗೆ ಅವರು ಮನೆಗೆ ವಾಪಸ್ ಬಾರದ ಹಿನ್ನೆಲೆಯಲ್ಲಿ ಕಾರ್ಮಿಕರು ಜಮೀನಿನಲ್ಲಿ ಹುಡುಕಾಡಿದಾಗ ಕುಸಿದು ಬಿದ್ದಿರುವುದು ಕಂಡು ಬಂದಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಈ ವೇಳೆಗಾಗಲೇ ಮೃತಪಟ್ಟಿರುವುದಾಗಿ ಪರೀಕ್ಷಿಸಿದ ವೈದ್ಯರು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...