
ದಾವಣಗೆರೆ: ಹೆಜ್ಜೇನು ದಾಳಿಯಿಂದ ರೈತ ಮೃತಪಟ್ಟ ಘಟನೆ ದಾವಣಗೆರೆ ಜಿಲ್ಲೆ ಮಾಯಕೊಂಡ ಸಮೀಪದ ಹುಚ್ಚವ್ವನಹಳ್ಳಿಯಲ್ಲಿ ನಡೆದಿದೆ.
ಮುತ್ತಪ್ಪರ ನಾಗಪ್ಪ(72) ಮೃತಪಟ್ಟವರು ಎಂದು ಹೇಳಲಾಗಿದೆ. ನಾಗಪ್ಪ ತೋಟಕ್ಕೆ ಹೋಗುತ್ತಿದ್ದ ವೇಳೆ ಮಾರ್ಗ ಮಧ್ಯದಲ್ಲಿ ಹೆಜ್ಜೆನು ಹುಳಗಳು ಕಚ್ಚಿ ಮೃತಪಟ್ಟಿದ್ದಾರೆ. ಗುರುವಾರ ಬೆಳಗ್ಗೆ ಎಂದಿನಂತೆ ಅವರು ತೋಟಕ್ಕೆ ಹೊರಟಿದ್ದ ವೇಳೆ ಏಕಾಏಕಿ ಭಾರಿ ಸಂಖ್ಯೆಯ ಹೆಜ್ಜೆನು ಹುಳಗಳು ದಾಳಿ ಮಾಡಿ ಕಚ್ಚಿವೆ. ಇದರಿಂದಾಗಿ ತೀವ್ರ ಅಸ್ವಸ್ಥರಾಗಿದ್ದ ನಾಗಪ್ಪ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾರೆ.