
ಬಳ್ಳಾರಿ: ಪಂಪ್ ಸೆಟ್ ತೆಗೆಯಲು ಹೋಗಿದ್ದಾಗ ತುಂಗಭದ್ರಾ ನದಿಯಲ್ಲಿ ಮುಳುಗಿ ರೈತರೊಬ್ಬರು ಸಾವನ್ನಪ್ಪಿರುವ ಘಟನೆ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ನಂದಿಪುರ ಕ್ಯಾಂಪ್ ಗಡ್ಡೆ ಬಳಿ ನಡೆದಿದೆ.
ಹೀರನಾಗಪ್ಪ (35) ಮೃತ ರೈತ. ನದಿ ಮೂಲಕ ಜಮೀನಿಗೆ ನೀರು ಹರಿಸಲೆಂದು ಪಂಪ್ ಸೆಟ್ ಅಳವಡಿಸಲಾಗಿತ್ತು. ಆದರೆ ಮಳೆಯಿಂದಾಗಿ ಪಂಪ್ ಸೆಟ್ ಗೆ ತ್ಯಾಜ್ಯ ಅಡ್ಡ ಬಂದಿದ್ದರಿಂದ ಪಂಪ್ ಸೆಟ್ ತೆಗೆಯಲೆಂದು ನದಿಗೆ ಇಳಿದಿದ್ದಾರೆ. ಈ ವೇಳೆ ನದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಸಿರಗುಪ್ಪ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.