alex Certify ಪರಸ್ಪರ ಮಂಗಳಸೂತ್ರ ಕಟ್ಟಿಕೊಂಡು ಸಮಾನತೆಯ ಮಂತ್ರದೊಂದಿಗೆ ಗೃಹಸ್ಥಾಶ್ರಮ ಪ್ರವೇಶಿಸಿದ ನವಜೋಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪರಸ್ಪರ ಮಂಗಳಸೂತ್ರ ಕಟ್ಟಿಕೊಂಡು ಸಮಾನತೆಯ ಮಂತ್ರದೊಂದಿಗೆ ಗೃಹಸ್ಥಾಶ್ರಮ ಪ್ರವೇಶಿಸಿದ ನವಜೋಡಿ

ಲಿಂಗ ಸಮಾನತೆಯನ್ನು ಮತ್ತೊಂದು ಮಟ್ಟಕ್ಕೆ ಕೊಂಡೊಯ್ದಿರುವ ಕರ್ನಾಟಕದ ಜೋಡಿಯೊಂದು, ತಮ್ಮ ಮದುವೆಯಲ್ಲಿ ಪರಸ್ಪರ ತಾಳಿ ಕಟ್ಟಿಕೊಂಡಿದ್ದಾರೆ.

ಚಾಮರಾಜನಗರದಲ್ಲಿ ಜರುಗಿದ ಈ ಮದುವೆಯಲ್ಲಿ, ರೈತ ಹೋರಾಟಗಾರ ಪ್ರೊ. ಎಂ.ಡಿ. ನಂಜುಂಡಸ್ವಾಮಿಯವರ ಪುಣ್ಯಭೂಮಿಯಲ್ಲಿ ನಿಂತುಕೊಂಡ ನವದಂಪತಿ ಪರಸ್ಪರ ತಾಳಿ ಕಟ್ಟಿಕೊಂಡಿದ್ದಾರೆ.

ʼಸುಖ – ಸಂತೋಷ – ಆರ್ಥಿಕʼ ವೃದ್ಧಿಗೆ ಮನೆಯಲ್ಲಿ ಬೆಳೆಸಿ ಈ ಗಿಡ

ಮದುಮಕ್ಕಳಾದ ಪೃಥ್ವಿ ಹಾಗೂ ಶೋಭಾ ಇದೇ ವೇಳೆ ರುದ್ರಾಕ್ಷಿ ಮಂಗಳಸೂತ್ರ ಧಾರಣೆ ಬಳಿಕ ತಮ್ಮ ದಾಂಪತ್ಯ ಜೀವನದಲ್ಲಿ ಸಮಾನತೆ ಕಾಪಾಡಿಕೊಂಡು, ಅನ್ಯೋನ್ಯವಾಗಿ ಬಾಳುವುದಾಗಿ ಶತಮಾನಗಳ ಉದ್ದಕ್ಕೂ ಅನೇಕ ಮಹನೀಯರು ಬೋಧಿಸಿರುವ ವಚನಗಳನ್ನು ಉಚ್ಛರಿಸಿದ್ದಾರೆ.

’ವಚನ ಕಲ್ಯಾಣೋತ್ಸವ’ ಎಂದು ಕರೆಯಲಾಗುವ ಈ ವಿಶಿಷ್ಟ ಹಾಗೂ ಸರಳ ಸಂಪ್ರದಾಯದಲ್ಲಿ ಮದುಮಕ್ಕಳು ವಚನಗಳ ಅನುಸಾರ ಪ್ರಮಾಣ ಮಾಡುತ್ತಾರೆ. ಪೃಥ್ವಿ ವೃತ್ತಿಯಲ್ಲಿ ರೈತರಾಗಿದ್ದು, ಅವರ ತಂದೆ ಹೊನ್ನೂರು ಪ್ರಕಾಶ್, ರೈತ ಸಂಘಟನೆಯ ಜಿಲ್ಲಾಧ್ಯಕ್ಷರಾಗಿದ್ದಾರೆ.

ಸರಣಿಗೆ ಮೊದಲೇ ಟೀಂ ಇಂಡಿಯಾಗೆ ಬಿಗ್ ಶಾಕ್: ರೋಹಿತ್ ಶರ್ಮಾ ಔಟ್, ಪ್ರಿಯಾಂಕ್ ಪಾಂಚಾಲ್ ಸೇರ್ಪಡೆ

“ಮದುವೆ ಮಾಡಲೆಂದು ಹೋಗಿ ದಿವಾಳಿಯಾಗಿರುವ ರೈತರನ್ನು ನಾನು ನೋಡಿದ್ದೇನೆ. ಈ ಅಭ್ಯಾಸಕ್ಕೆ ಕೊನೆ ಹಾಡಬೇಕೆಂಬ ಉದ್ದೇಶದಿಂದ ನಾವು ಈ ವಿಶಿಷ್ಟ ಆಚರಣೆಯೊಂದಕ್ಕೆ ನಾಂದಿ ಹಾಡಿದ್ದು, ನಮ್ಮ ಮಗನಿಂದಲೇ ಆರಂಭಿಸಿದ್ದೇವೆ. ಇನ್ನಷ್ಟು ದಂಪತಿಗಳು ಈ ದಾರಿಯನ್ನೇ ತುಳಿದು, ಅರ್ಥಪೂರ್ಣ ಜೀವನ ನಡೆಸುತ್ತಾರೆಂದು ಆಶಿಸುತ್ತೇವೆ,” ಎಂದು ಪ್ರಕಾಶ್ ತಿಳಿಸಿದ್ದಾರೆ.

Farmer Couple from Karnataka Tie 'Mangalsutra' Around Each Other's Neck in  Unique Wedding

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...