alex Certify ‘ರೈತರ ಹೋರಾಟವು ಕೇಂದ್ರದ ದುರಂಹಕಾರವನ್ನು ಮಣಿಸಿದೆ’ – ಕೃಷಿ ಮಸೂದೆ ವಾಪಸ್​ ಸಂಬಂಧ ರಾಹುಲ್​ ಗಾಂಧಿ ಪ್ರತಿಕ್ರಿಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ರೈತರ ಹೋರಾಟವು ಕೇಂದ್ರದ ದುರಂಹಕಾರವನ್ನು ಮಣಿಸಿದೆ’ – ಕೃಷಿ ಮಸೂದೆ ವಾಪಸ್​ ಸಂಬಂಧ ರಾಹುಲ್​ ಗಾಂಧಿ ಪ್ರತಿಕ್ರಿಯೆ

ರೈತರ ಪ್ರತಿಭಟನೆಗೆ ಕೊನೆಗೂ ಮಣಿದ ಕೇಂದ್ರ ಸರ್ಕಾರ ಮೂರು ಕೃಷಿ ಕಾನೂನುಗಳನ್ನು ವಾಪಸ್​ ಪಡೆದಿದೆ. ಸ್ವತಃ ಪ್ರಧಾನಿ ಮೋದಿಯೇ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

ಕೇಂದ್ರ ಸರ್ಕಾರದ ಈ ಘೋಷಣೆಯ ವಿಚಾರವಾಗಿ ಪ್ರತಿಕ್ರಿಯಿಸಿದ ಸಂಸದ ಹಾಗೂ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ರೈತರ ಪ್ರತಿಭಟನೆಯು ಕೇಂದ್ರದ ದುರಂಹಕಾರವನ್ನು ಬಗ್ಗು ಬಡಿಯುವಲ್ಲಿ ಯಶಸ್ವಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಗುರು ನಾನಕ್​ ಜಯಂತಿ ಪ್ರಯುಕ್ತ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಮೂರು ಕೃಷಿ ಕಾನೂನುಗಳಿಂದ ರೈತರಿಗೆ ಒಳ್ಳೆಯ ಪ್ರಯೋಜನಗಳು ಇದ್ದವು. ಸಾಕಷ್ಟು ಪ್ರಯತ್ನಗಳ ಬಳಿಕವೂ ನಮಗೆ ಒಂದು ಭಾಗದ ರೈತರ ಮನಸ್ಸನ್ನು ಓಲೈಸಲು ಸಾಧ್ಯವಾಗಲಿಲ್ಲ. ಈ ಮೂರು ಕೃಷಿ ಕಾನೂನುಗಳ ಉದ್ದೇಶವೇ ಸಣ್ಣ ರೈತರನ್ನು ಅಭಿವೃದ್ಧಿ ಮಾಡುವುದಾಗಿತ್ತು ಎಂದು ಹೇಳಿದರು.

ಕೃಷಿ ಬಜೆಟ್​ನ ಮೊತ್ತ ಐದು ಪಟ್ಟು ಹೆಚ್ಚಾಗಿದ್ದು ವಾರ್ಷಿಕವಾಗಿ 1.25 ಲಕ್ಷ ಕೋಟಿ ರೂಪಾಯಿ ರೈತರ ಅಭಿವೃದ್ಧಿಗೆ ಮೀಸಲಿಡಲಾಗುತ್ತಿದೆ. ಸಣ್ಣ ರೈತರ ಕಲ್ಯಾಣಕ್ಕೆಂದು ಕೇಂದ್ರ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ನನ್ನ 5 ದಶಕಗಳ ಸಾರ್ವಜನಿಕ ಜೀವನದಲ್ಲಿ ರೈತರ ಕಷ್ಟ ಹಾಗೂ ಸವಾಲುಗಳನ್ನು ತುಂಬಾ ಹತ್ತಿರದಿಂದ ನೋಡಿದ್ದೇನೆ ಎಂದು ಪ್ರಧಾನಿ ಮೋದಿ ಹೇಳಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...