ಬಾಲಿವುಡ್ ನಟಿ, ನಿರ್ದೇಶಕಿ ಫರಾ ಖಾನ್ ಮತ್ತು ನಿರ್ದೇಶಕ ಕರಣ್ ಜೋಹರ್ ಬಹಳ ವಿಶೇಷವಾದ ಬಾಂಧವ್ಯವನ್ನು ಹಂಚಿಕೊಂಡಿದ್ದಾರೆ. ಫರಾ ಖಾನ್ ಮತ್ತು ಕರಣ್ ಜೋಹರ್ 9 ವರ್ಷಗಳ ನಂತರ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ಗಾಗಿ ಮತ್ತೆ ಒಂದಾಗುತ್ತಿದ್ದಾರೆ.
ಅದ್ಭುತವಾದ ವೃತ್ತಿಪರ ಸಂಬಂಧದ ಹೊರತಾಗಿ, ಇಬ್ಬರೂ ಕೂಡ ಉತ್ತಮ ಸ್ನೇಹಿತರಾಗಿದ್ದಾರೆ. ಫರಾ ಅವರು ಕರಣ್ ಅವರ ಚೊಚ್ಚಲ ಚಿತ್ರ ‘ಕುಚ್ ಕುಚ್ ಹೋತಾ ಹೈ’ನಲ್ಲಿ ಕೆಲಸ ಮಾಡಿದ್ದಾರೆ, 2012 ರಲ್ಲಿ ಬಿಡುಗಡೆಯಾದ ‘ಸ್ಟೂಡೆಂಟ್ ಆಫ್ ದಿ ಇಯರ್’ನಲ್ಲಿ ಕರಣ್ ಜೊತೆಗೆ ಫರಾ ಅವರು ಮಾಡಿದ್ದ ಕೊನೆಯ ಚಿತ್ರ ಇದಾಗಿತ್ತು.
ಇದೀಗ, ಒಂಬತ್ತು ವರ್ಷಗಳ ಅಂತರದ ನಂತರ ಫರಾ ಖಾನ್, ಕರಣ್ ಜೋಹರ್ ಅವರ ಮುಂದಿನ ನಿರ್ದೇಶನದ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ಯಲ್ಲಿ ರಣವೀರ್ ಸಿಂಗ್ ಮತ್ತು ಆಲಿಯಾ ಭಟ್ ಪ್ರಮುಖ ಪಾತ್ರವಿರುವ ಚಿತ್ರದಲ್ಲಿ ನಟಿಸಿದ್ದಾರೆ. ಕರಣ್ ತನ್ನ ಹೃದಯದಲ್ಲಿ ಉತ್ತಮ ಗೆಳೆಯನ ಸ್ಥಾನವನ್ನು ಹೊಂದಿರುವ ವ್ಯಕ್ತಿ. ಹೀಗಾಗಿ ಮತ್ತೆ ಅವರೊಂದಿಗೆ ಕೆಲಸ ಮಾಡಲು ಉತ್ಸುಕಳಾಗಿರುವುದಾಗಿ ಫರಾ ಖಾನ್ ತಿಳಿಸಿದ್ದಾರೆ.
ಫರಾ ಇತ್ತೀಚಿಗೆ ಸೂರ್ಯವಂಶಿ ಚಿತ್ರದ ಟಿಪ್ ಟಿಪ್ ಹಾಡಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ. ಇದು ಮೊಹ್ರಾ (1994) ದ ಟಿಪ್ ಟಿಪ್ ಬರ್ಸಾ ಪಾನಿಯ ಮರುಸೃಷ್ಟಿಯಾಗಿತ್ತು.