ಮುಂಬರುವ ಅಕ್ಷಯ್ ಕುಮಾರ್ ಅವರ ಮರಾಠಿ ಚಿತ್ರ ʼವೇದಾತ್ ಮರಾಠೆ ವೀರ್ ದೌಡ್ಲೆ ಸಾತ್ʼ ನ ಫಸ್ಟ್ ಲುಕ್ ಬಿಡುಗಡೆಯಾಗಿದ್ದು , ಭಾರೀ ಟೀಕೆಗೆ ಗುರಿಯಾಗಿದೆ. ಚಿತ್ರದಲ್ಲಿ ಅಕ್ಷಯ್ ಕುಮಾರ್ ಅವರ ಫಸ್ಟ್ ಲುಕ್ ಅನ್ನು ಇತ್ತೀಚೆಗೆ ಚಿತ್ರ ತಯಾರಕರು ಬಿಡುಗಡೆ ಮಾಡಿದ್ದಾರೆ.
ಬಾಲಿವುಡ್ ನ ಅಕ್ಕಿ, ಚಿತ್ರಕ್ಕಾಗಿ ಛತ್ರಪತಿ ಶಿವಾಜಿಯ ಪಾತ್ರದಲ್ಲಿ ಹೆಜ್ಜೆ ಹಾಕುವುದನ್ನು ಫಸ್ಟ್ ಲುಕ್ ನಲ್ಲಿ ಕಾಣಬಹುದು.
ಆದರೆ ಫಸ್ಟ್ ಲುಕ್ ಅನಾವರಣಗೊಂಡ ತಕ್ಷಣ ನಟನನ್ನು ಸಾಮಾಜಿಕ ಮಾಧ್ಯಮದಲ್ಲಿ ತೀವ್ರವಾಗಿ ಟೀಕಿಸಲಾಗ್ತಿದೆ. ಚಿತ್ರೀಕರಣವನ್ನು ಪ್ರಾರಂಭಿಸುವ ಮೊದಲು ಸಾಕಷ್ಟು ಸಂಶೋಧನೆ ಮಾಡದಿದ್ದಕ್ಕಾಗಿ ಅವರನ್ನು ಕಟುವಾಗಿ ಟೀಕಿಸಲಾಗ್ತಿದೆ.
ಅಕ್ಷಯ್ ಛತ್ರಪತಿ ಶಿವಾಜಿ ಮಹಾರಾಜರಂತೆ ನಡೆದು ಬರುತ್ತಿರುವಾಗ ಅಕ್ಷಯ್ ತಲೆ ಮೇಲೆ ಬಲ್ಬ್ ಗಳು ಕಾಣುತ್ತವೆ. ಇದೇ ವಿಚಾರಕ್ಕೆ ಸಿನಿಮಾ ತಂಡ ಟ್ರೋಲ್ ಗೊಳಗಾಗಿದೆ.
ಛತ್ರಪತಿ ಶಿವಾಜಿ ಮಹಾರಾಜರ ಅವಧಿಯ ನಂತರ ಬಲ್ಬ್‌ಗಳನ್ನು ಕಂಡುಹಿಡಿಯಲಾಯಿತು ಎಂದು ಟ್ರೋಲ್ ಮಾಡಲಾಗ್ತಿದೆ.
ಶಿವಾಜಿ ಮಹಾರಾಜ್ 1674 ರಿಂದ 1680 ರವರೆಗೆ ಆಳ್ವಿಕೆ ನಡೆಸಿದರು. ಥಾಮಸ್ ಎಡಿಸನ್ 1880 ರಲ್ಲಿ ಲೈಟ್ ಬಲ್ಬ್ ಅನ್ನು ಕಂಡುಹಿಡಿದರು ಎಂದು ವ್ಯಂಗ್ಯವಾಡುತ್ತಾ ಟ್ರೋಲ್ ಮಾಡ್ತಿದ್ದಾರೆ.