
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಏಕದಿನ ಕ್ರಿಕೆಟ್ ಪಂದ್ಯ ವೀಕ್ಷಣೆಗೆ ಅಭಿಮಾನಿಗಳ ಕ್ರೇಜ್ ಜೋರಾಗಿದೆ.
ಮಾರ್ಚ್ 22 ರಂದು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಏಕದಿನ ಅಂತರಾಷ್ಟ್ರೀಯ ಪಂದ್ಯ ನಡೆಯಲಿದೆ. ಇದಕ್ಕೆ ಚೆನ್ನೈನ ಜನರು ಟಿಕೆಟ್ ಪಡೆಯಲು ತಡರಾತ್ರಿ 2 ಗಂಟೆಗೇನೇ ಕ್ಯೂನಲ್ಲಿ ನಿಂತಿದ್ದಾರೆ. ಈ ಫೋಟೋ ವೈರಲ್ ಆಗಿದೆ.
ಟಿಕೆಟ್ ಕೌಂಟರ್‌ಗಳು ತೆರೆಯುವ ಕೆಲ ಗಂಟೆಗಳ ಮೊದಲು ಅಭಿಮಾನಿಗಳು 2 ಗಂಟೆಯಿಂದಲೇ ಸಾಲುಗಟ್ಟಿ ನಿಂತಿದ್ದಾರೆ ಎಂದು ಟ್ವೀಟ್ ತಿಳಿಸಿದೆ. ಮಾರ್ಚ್ 17 ರಂದು ನಡೆದ ಆರಂಭಿಕ ಮುಖಾಮುಖಿಯಲ್ಲಿ ಐದು ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದ ನಂತರ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಭರವಸೆಯಲ್ಲಿ ಆರಂಭಿಸಿದೆ.