ಸಮುದ್ರದತ್ತ ಮುಖ ಮಾಡಿರುವ ಬಂಗಲೆಗಳು ಮುಂಬಯಿಯ ಶ್ರೀಮಂತರಿಗೆ ಭಾರೀ ಇಷ್ಟವಾಗುವ ಆಸ್ತಿಗಳು. ಇದೀಗ ಸಮುದ್ರದತ್ತ ಮುಖ ಮಾಡಿರುವ ಮರದ ಮೇಲಿನ ಮನೆಗಳನ್ನು ಬಾಂದ್ರಾದ ಉದ್ಯಾನವೊಂದರಲ್ಲಿ ನಿರ್ಮಾಣ ಮಾಡಲು ಬೃಹನ್ಮುಂಬಯಿ ಮಹಾನಗರ ಪಾಲಿಕೆ (ಬಿಎಂಸಿ) ಚಿಂತನೆ ನಡೆಸಿದೆ.
ಅರಬ್ಬೀ ಸಮುದ್ರದ ವಿಹಂಗಮ ನೋಟ ಕೊಡಮಾಡುವ ಎರಡಂತಸ್ತಿನ ಮನೆಗಳನ್ನು ತಲಾ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲು ಪೌರಾಡಳಿತ ಆಸಕ್ತರನ್ನು ಆಹ್ವಾನಿಸಿದೆ. ಸಂಪುಟ ಸಚಿವ ಆದಿತ್ಯ ಠಾಕರೆ ಕೊಟ್ಟ ಐಡಿಯಾ ಮೇಲೆ ಈ ಯೋಜನೆಯನ್ನು ನಗರ ಯೋಜನಾ ಇಲಾಖೆಗೆ ವಹಿಸಲಾಗಿದೆ.
ಮದುವೆ ದಿನವೇ ನೀ ಮೊದಲಾ…..ನಾ ಮೊದಲಾ…..ಅಂದ್ರು ವಧು-ವರ..!
“ಯೋಜನೆಯ ಅನುಷ್ಠಾನಕ್ಕೆ ದುಡ್ಡನ್ನು ಜಿಲ್ಲಾ ಯೋಜನಾ ಅಭಿವೃದ್ಧಿ ಸಮಿತಿ (ಡಿಪಿಡಿಸಿ) ನೀಡಲಿದೆ. ಬಿಎಂಸಿ ಇದರಲ್ಲಿ ಕೇವಲ ಕಾರ್ಯವಾಹನ ಸಂಸ್ಥೆಯಾಗಿದೆ,” ಎನ್ನುತ್ತಾರೆ ಯೋಜನಾ ಇಲಾಖೆಯ ಮುನ್ಸಿಪಲ್ ಆಯುಕ್ತ ಕಿರಣ್ ದಿಘಾವಾಕರ್.
ವರ್ಲಿಯ ಶಾಸಕ ಆದಿತ್ಯ ಠಾಕರೆಗೆ ಕೊಡಮಾಡಿದ ಶಾಸಕr ಪ್ರದೇಶಾಭಿವೃದ್ಧಿ ನಿಧಿಯಲ್ಲಿ ಒಂದು ಕೋಟಿ ರೂಪಾಯಿಯನ್ನು ಇದಕ್ಕೆಂದೇ ಘೋಷಿಸಲಾಗಿದೆ. ಈ ನಿರ್ಮಾಣಕ್ಕಾಗಿ ಕಡಲತೀರದ ಸಂರಕ್ಷಣಾ ಸಂಸ್ಥೆಗಳಿಂದ ಅನುಮತಿ ಪಡೆಯಬೇಕಿದ್ದು, ಇದಾದ ಬಳಿಕ ಮರಗಳಿಂದ ಮನೆಗಳನ್ನು ಕಟ್ಟಲಾಗುವುದು ಎಂದು ತಿಳಿಸಲಾಗಿದೆ.