
ಬಹುನಿರೀಕ್ಷಿತ ಚಿತ್ರ ’83’ಯಲ್ಲಿ ಬಲ್ವಿಂದರ್ ಸಂಧುರ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟ ಹಾಗೂ ಗಾಯಕ ಅಮ್ಮಿ ವಿರ್ಕ್, 1983ರ ಕ್ರಿಕೆಟ್ ವಿಶ್ವಕಪ್ ಜಯಿಸಿದ ಭಾರತ ತಂಡದ ಆಟಗಾರರೊಂದಿಗೆ ತಮ್ಮ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಕಪಿಲ್ ದೇವ್, ಸುನೀಲ್ ಗವಾಸ್ಕರ್, ಬಲ್ವಿಂದರ್ ಸಂಧು, ಕೃಷ್ಣಮಾಚಾರಿ ಶ್ರೀಕಾಂತ್, ಮೋಹಿಂದರ್ ಅಮರ್‌ನಾಥ್, ರೋಜರ್ ಬಿನ್ನಿ ಮತ್ತು ’83’ ಚಿತ್ರದ ನಾಯಕ ರಣವೀರ್ ಸಿಂಗ್ ಜೊತೆಗೆ ಅಮ್ಮಿ ತಮ್ಮ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಹೊಸ ವರ್ಷದ ಸಂಭ್ರಮಾಚರಣೆ ಲೆಕ್ಕಾಚಾರದಲ್ಲಿದ್ದವರಿಗೆ ‘ಬಿಗ್ ಶಾಕ್’
ಇದೇ ವೇಳೆ, ಚಿತ್ರದ ಎಕ್ಸ್‌ಕ್ಲೂಸಿವ್ ಸ್ಕ್ರೀನಿಂಗ್ ಅನ್ನು ಕೇಂದ್ರದ ಕ್ರೀಡಾ ಮತ್ತು ಯುವಜನ ಖಾತೆ ಸಚಿವ ಅನುರಾಗ್ ಠಾಕೂರ್, ಜವಳಿ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪಿಯೂಶ್ ಗೋಯೆಲ್ ಹಾಗೂ 10 ಸಂಸದರು ಮತ್ತು ಶಾಸಕರಿಗೆ ತೋರಿಸಿದೆ ಚಿತ್ರ ತಂಡ.
