ಶಿಮ್ಲಾ ಪ್ರವಾಸದಲ್ಲಿರೋ ಪ್ರಧಾನಿ ಮೋದಿ ಅವರಿಗೆ ಒಂದು ಅದ್ಭುತವಾದ ಉಡುಗೊರೆ ಸಿಕ್ಕಿದೆ. ಆ ಉಡುಗೊರೆ ನೋಡಿದಾಕ್ಷಣ ಪ್ರಧಾನಿ ಮೋದಿ ಭಾವುಕರಾದರು ಅಷ್ಟೆಅಲ್ಲ ಬಾಲಕಿಯ ಅದ್ಭುತ ಕಲೆಯನ್ನ ನೋಡಿ ಬೆನ್ನು ತಟ್ಟಿದ್ದರು.
ಹಿಮಾಚಲ ಪ್ರದೇಶದಲ್ಲಿ ಏರ್ಪಡಿಸಿದ್ದ ರ್ಯಾಲಿಯೊಂದರಲ್ಲಿ ಭಾವಹಿಸಿ ಹಿಂದಿರುಗುತ್ತಿದ್ದಾಗ ಪ್ರಧಾನಿ ಮೋದಿ ಮಾರ್ಗ ಮಧ್ಯದಲ್ಲಿ ಕಾರನ್ನ ನಿಲ್ಲಿಸಿದ್ದಾರೆ. ನಂತರ ಅಲ್ಲಿ ಸೇರಿದ್ದ ಜನರ ಜೊತೆ ಮಾತುಕತೆ ನಡೆಸಿದ್ದಾರೆ. ಅದೇ ಜನರ ಮಧ್ಯದಲ್ಲಿ ಬಾಲಕಿಯೊಬ್ಬಳು ಮೋದಿ ಅವರ ಕೈಗೆ ಒಂದು ಉಡುಗೊರೆ ಕೊಟ್ಟಿದ್ದಾಳೆ.
BIG NEWS: ಪಠ್ಯ ಕೈಬಿಡಲು ಮುಂದುವರೆದ ಸಾಹಿತಿಗಳ ಒತ್ತಡ: ಶಿಕ್ಷಣ ಸಚಿವರಿಗೆ ಪತ್ರ ಬರೆದ ಬೊಳುವಾರು ಮಹಮದ್ ಕುಂಞಿ
ಅದು ಮೋದಿಯವರ ಅಮ್ಮ ಹೀರಾಬೇನ್ ಪೆನ್ಸಿಲ್ ಸ್ಕೆಚ್ ಆಗಿತ್ತು. ಅದನ್ನ ನೋಡಿದಾಕ್ಷಣ ಖುಷಿಯಿಂದ ಮೋದಿ ಬಾಲಕಿಗೆ ಈ ಸ್ಕೆಚ್ ಮಾಡಲು ಎಷ್ಟು ದಿನಗಳ ಕಾಲಾವಕಾಶ ತೆಗೆದುಕೊಂಡಿದ್ದು ಅಂತ ಕೇಳಿದ್ದಾರೆ. ಆಗ ಆಕೆ ಕೇವಲ ಒಂದು ದಿನದಲ್ಲಿ ನಾನು ಈ ಚಿತ್ರವನ್ನ ಬಿಡಿಸಿದ್ದೇನೆ. ನಿಮ್ಮದು ಕೂಡಾ ಸ್ಕೆಚ್ ನಾನು ಬಿಡಿಸಿದ್ದೇನೆ ಅಂತ ಹೇಳಿದ್ದಾಳೆ.
ಅಷ್ಟು ಜನರ ಮಧ್ಯದಲ್ಲಿಯೂ ಆ ಬಾಲಕಿಯ ಸ್ಕೇಚ್ ನೋಡಿ ಮೆಚ್ಚಿ, ಆಕೆಯ ಜೊತೆ ಮಾತನಾಡಿದ ಈ ವಿಡಿಯೋ ಈಗ ಸೊಶಿಯಲ್ ಮಿಡಿಯಾದಲ್ಲಿ ವೈರಲ್ ಆಗ್ತಿದೆ. ಬಾಲಕಿ ಜೊತೆ ಮಾತನಾಡಿದ್ದು, ಆಕೆಯ ಪ್ರತಿಭೆಯನ್ನ ನೋಡಿ ಮೋದಿ ಮೆಚ್ಚಿದ ರೀತಿಗೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.
ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಡಿಎನ್ಎ ಸರ್ಕಾರದ 8 ವರ್ಷಗಳನ್ನ ಪೂರೈಸಿದ `ಗರೀಬ್ ಕಲ್ಯಾಣ್ ಸಮ್ಮೇಳನ`ದಲ್ಲಿ ಭಾಗವಹಿಸಿದ ಪ್ರಧಾನಿ ಮೋದಿ ಚುನಾವಣೆಗೆ ಸಜ್ಜಾಗಿರುವ ಹಿಮಾಚಲ ಪ್ರದೇಶಕ್ಕೆ ಭೇಟಿ ನೀಡಿದ್ದರು. ಪ್ರಧಾನಿ ಮಂತ್ರಿಯವರು ಶಿಮ್ಲಾದ ರಿಡ್ಜ್ ಮೈದಾನದಲ್ಲಿ ವಿವಿಧ ಸರ್ಕಾರಿ ಯೋಜನೆಗಳ ಫಲಾನುಭವಿಗಳಿಗೆ ಸಂವಾದ ನಡೆಸಿದ್ದು, ಇದೇ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 11ನೇ ಕಂತನ್ನು ಬಿಡುಗಡೆ ಮಾಡಿದರು.