
ನಟಿ ಸಮಂತಾಗಿಂದು ಹುಟ್ಟುಹಬ್ಬದ ಸಂಭ್ರಮ. ಈ ಸಂಭ್ರಮದ ದಿನದಂದು ಅವರ ಅಭಿಮಾನಿಯೊಬ್ಬರು ದೇಗುಲ ಕಟ್ಟಿ ಉದ್ಘಾಟಿಸುವ ಮೂಲಕ ನೆಚ್ಚಿನ ನಟಿಗೆ ಹುಟ್ಟುಹಬ್ಬದ ಗಿಫ್ಟ್ ನೀಡಿದ್ದಾರೆ.
ಖುಷ್ಬು, ನಿಧಿ ಅಗರ್ವಾಲ್ ಮತ್ತು ಹನ್ಸಿಕಾ ಅವರಿಗೆ ತಮಿಳುನಾಡಿನಲ್ಲಿ ಅಭಿಮಾನಿಗಳು ದೇವಾಲಯಗಳನ್ನು ಕಟ್ಟಿದ್ದರೆ ಇದರ ಗಾಳಿ ಇದೀಗ ಆಂಧ್ರಪ್ರದೇಶಕ್ಕೂ ಬೀಸಿದೆ.
ಇತ್ತೀಚೆಗೆ ಪೌರಾಣಿಕ ಚಿತ್ರ ಶಾಂಕುಂತಲಂನಲ್ಲಿ ಕಾಣಿಸಿಕೊಂಡಿದ್ದ ಸಮಂತಾ ರುತ್ ಪ್ರಭು ಅವರನ್ನು ಗೌರವಿಸಲು ಬಾಪಟ್ಲ ನಿವಾಸಿ ತೆನಾಲಿ ಸಂದೀಪ್ ಅವರು ದೇವಾಲಯವನ್ನು ನಿರ್ಮಿಸಿದ್ದಾರೆ. ಅವರು ಆಲಪಾಡು ಗ್ರಾಮದ ತಮ್ಮ ಮನೆಯ ಸಮೀಪದಲ್ಲಿ ದೇವಾಲಯವನ್ನು ನಿರ್ಮಿಸಿದ್ದಾರೆ. ಸಮಂತಾ ಹುಟ್ಟುಹಬ್ಬದ ಅಂಗವಾಗಿ ಶುಕ್ರವಾರ (ಏಪ್ರಿಲ್ 28) ಉದ್ಘಾಟನೆ ಮಾಡಿದ್ದಾರೆ. ನಟಿಯ ಪ್ರತಿಮೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೃತ್ತಿಯಲ್ಲಿ ಕಾರ್ ಡ್ರೈವರ್ ಆಗಿರುವ ಸಂದೀಪ್ ಅವರು ಸಮಂತಾಗೆ ಮೈಯೋಸಿಟಿಸ್ ಇರುವುದು ಪತ್ತೆಯಾದ ನಂತರ ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸಲು ತಿರುಪತಿ, ಚೆನ್ನೈ ಮತ್ತು ನಾಗಪಟ್ಟಣಂಗಳಿಗೆ ತೀರ್ಥಯಾತ್ರೆ ಕೈಗೊಂಡಿದ್ದರು.
ನಾನು ಸಮಂತಾ ಅವರ ವೃತ್ತಿ ಜೀವನದ ಆರಂಭದಿಂದಲೂ ಅವರ ಅಭಿಮಾನಿಯಾಗಿದ್ದೇನೆ, ಆದರೆ ನನಗೆ ಸ್ಫೂರ್ತಿ ನೀಡಿದ್ದು ಅವರ ಸಂವೇದನೆ ಮತ್ತು ದಯೆ. ಅವರು ಪ್ರತ್ಯುಷಾ ಫೌಂಡೇಶನ್ ಮೂಲಕ ಹಲವಾರು ಕುಟುಂಬಗಳಿಗೆ ಮತ್ತು ಮಕ್ಕಳಿಗೆ ಸಹಾಯ ಮಾಡಿದ್ದಾರೆ ಎಂದಿದ್ದಾರೆ.