
ಎಂಎಸ್ ಧೋನಿ ಅದ್ಭುತ ಭಾರತೀಯ ಕ್ರಿಕೆಟಿಗರಲ್ಲೊಬ್ಬರು. ಧೋನಿಯ ಸಿಂಪಲ್ ವ್ಯಕ್ತಿತ್ವಕ್ಕೆ ಅನೇಕರು ಮಾರು ಹೋಗಿದ್ದಾರೆ. ಕ್ರಿಕೆಟ್ ಮಾತ್ರವಲ್ಲದೆ ಧೋನಿ ಎಂಟರ್‌ಟೈನ್‌ಮೆಂಟ್ ಪ್ರೈವೇಟ್ ಲಿಮಿಟೆಡ್ ಎಂಬ ನಿರ್ಮಾಣ ಕಂಪನಿಯನ್ನು ಪ್ರಾರಂಭಿಸಿದ್ದಾರೆ.
ಪ್ರಸ್ತುತ ಎಲ್‌ಜಿಎಂ ಎಂಬ ತಮಿಳು ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರದ ಬಿಡುಗಡೆಗಾಗಿ ಧೋನಿ, ಪತ್ನಿ ಸಾಕ್ಷಿ ಜೊತೆಗೆ ಚೆನ್ನೈನಲ್ಲಿದ್ದಾರೆ. ಅದಕ್ಕೂ ಮುನ್ನ ವಿಮಾನ ನಿಲ್ದಾಣದಲ್ಲಿ ಧೋನಿ ಬಂದಿಳಿಯುತ್ತಿದ್ದಂತೆ ಅಭಿಮಾನಿಗಳು ಗುಂಪುಗೂಡಿದ್ದಾರೆ.
ಧೋನಿಯ ಸರಳ ವ್ಯಕ್ತಿತ್ವಕ್ಕೆ ಅಭಿಮಾನಿಗಳು ಮಾರು ಹೋಗಿದ್ದಾರೆ. ಇತ್ತೀಚೆಗೆ ಸೆಕ್ಯೂರಿಟಿ ಗಾರ್ಡ್ ಒಬ್ಬರಿಗೆ ಧೋನಿ ಡ್ರಾಪ್ ಕೊಟ್ಟಿದ್ದರು. ಇರೋದು ಒಂದೇ ಹೃದಯ ಎಷ್ಟು ಸಲ ಕದಿಯುತ್ತೀರಾ ಅಂತಾ ಅಭಿಮಾನಿಗಳು ಕೇಳಿಕೊಂಡಿದ್ದರು. ಇದೀಗ ಮತ್ತೊಂದು ವಿಡಿಯೋ ವೈರಲ್ ಆಗಿದೆ.
ಧೋನಿ ಅವರ ಪತ್ನಿ ಸಾಕ್ಷಿಯೊಂದಿಗೆ ವಿಮಾನ ನಿಲ್ದಾಣದಲ್ಲಿ ಬಂದಿಳಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಭಿಮಾನಿಯೊಬ್ಬರು ಧೋನಿಯನ್ನು ಮೊಣಕಾಲಿನ ಗಾಯದ ಬಗ್ಗೆ ಕೇಳಿದ್ದಾರೆ. ಅಭಿಮಾನಿಗಳ ಗದ್ದಲದಿಂದಾಗಿ ಧೋನಿಗೆ ಪ್ರಶ್ನೆಯನ್ನು ಸರಿಯಾಗಿ ಉತ್ತರಿಸಲಾಗಲಿಲ್ಲ. ಆದರೂ, ವಿಮಾನ ನಿಲ್ದಾಣದಿಂದ ಹೊರಬರುವ ಮುನ್ನ ಧೋನಿ ಅಭಿಮಾನಿಯನ್ನು ನೋಡಿ ಕೈ ಬೀಸಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
ಕಳೆದ ತಿಂಗಳು ಮುಂಬೈ ಆಸ್ಪತ್ರೆಯಲ್ಲಿ ಧೋನಿ ಎಡ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈ ಋತುವಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಐದನೇ ಐಪಿಎಲ್ ಪ್ರಶಸ್ತಿಗೆ ಮುನ್ನಡೆಸಿದ ಧೋನಿ, ಟ್ರೋಫಿ ಎತ್ತಿಹಿಡಿದ್ರು. ಬಳಿಕ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾದ್ರು.