ಹೈದರಾಬಾದ್: ಇತ್ತೀಚೆಗೆ ಹೃದಯಾಘಾತ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿದ್ದು, ಇದೀಗ ತೆಲುಗು ಚಿತ್ರರಂಗದ ಖ್ಯಾತ ನಿರ್ಮಾಪಕ ಜಯದೇವ್(49) ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
ಸೋಮವಾರ ರಾತ್ರಿ ಹೈದರಾಬಾದ್ನಲ್ಲಿ ಜಯದೇವ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.’ಕೊರಂಗಿ ನುಂಚಿ’ ಸಿನಿಮಾದ ಮೂಲಕ ತಮ್ಮ ಸಿನಿಪಯಣ ಆರಂಭಿಸಿದ ನಿರ್ಮಾಪಕರು ‘ಸುರಭಿ’, ‘ಜನನಿ’, ಸೇರಿದಂತೆ ಹಲವು ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿದ್ದರು.ಅಲ್ಲದೇ ಅವರು ಹಲವು ರಾಷ್ಟ್ರ ಪ್ರಶಸ್ತಿಗಳನ್ನು ಪಡೆದಿದ್ದರು. ಕೆ.ಜಯದೇವ್ ಖ್ಯಾತ ಹಿರಿಯ ಪತ್ರಕರ್ತ ಕೆ.ಎನ್.ಟಿ. ಶಾಸ್ತ್ರಿಯವರ ಕಿರಿಯ ಪುತ್ರರಾಗಿದ್ದಾರೆ.